ತುಳಸಿ ಹಾಗು ತುಳಸಿ ಮಾಲೆಯ ಮಹಿಮೆ

ತುಳಸಿ ಒಂದು ಉತ್ಕೃಷ್ಟ ರಸಾಯನವಾಗಿದೆ, ಇದು ಉಷ್ನ ಹಾಗು ತ್ರಿದೋಷ ಶಾಮಕವಾಗಿದೆ. ರಕ್ತವಿಕಾರ, ಜ್ವರ, ವಾಯು, ಕೆಮ್ಮು ಹಾಗು ಜಂತುನಾಶಕವಾಗಿದೆ ಅಲ್ಲದೆ ಹೃದಯಕ್ಕೆ ಹಿತಕಾರಿಯಾಗಿದೆ.

  • ಬಿಳಿ ತುಳಸಿಯ ಸೇವನೆಯಿಂದ ತ್ವಚೆ, ಮಾಂಸ ಹಾಗು ಎಲುಬಿನ ರೋಗಗಳು ದೂರವಾಗುತ್ತವೆ
  • ಕಪ್ಪು ತುಳಸಿಯ ಸೇವನೆಯಿಂದ ಬಿಳಿ ಕಲೆಗಳು ದೂರವಾಗುತ್ತವೆ
  • ತುಳಸಿಯ ಬೇರು ಹಾಗು ಎಲೆಗಳು ಜ್ವರದಲ್ಲಿ ಉಪಯೋಗಕಾರಿಯಾಗಿವೆ
  • ವೀರ್ಯದೋಷಗಳಲ್ಲಿ ಇದರ ಬೀಜ ಲಾಭಕಾರಿಯಾಗಿದೆ, ತುಳಸಿಯ ಚಹಾ ಕುಡಿಯುವದರಿಂದ ಆಲಸ್ಯ, ಸುಸ್ತು ಹಾಗು ವಾತ-ಪಿತ್ತದ ವಿಕಾರಗಳು ದೂರವಾಗುತ್ತವೆ, ಹಸಿವು ಹೆಚ್ಚಾಗುತ್ತದೆ
  • ತುಳಸಿ ವನದಲ್ಲಿ ಮಾಡುವ ಪಿಂಡದಾನ ಮುಂತಾದವುಗಳಾದ ಪಿತೃಗಳಿಗೆ ಅಕ್ಷಯ ವಾಗುತ್ತದೆ. ಒಂದು ವೇಳೆ ತುಳಸಿಯ ಕಟ್ಟಿಗೆಯಿಂದ ತಯಾರಿಸಿದ ಮಾಲೆಗಳಿಂದ ಅಲಂಕ್ರತನಾಗಿ ಮನುಷ್ಯ ದೇವತೆಗಳ ಹಾಗು ಪಿತೃಗಳ ಪೂಜೆಯನ್ನು ಮಾಡಿದಲ್ಲಿ ಅದು ಕೋಟಿಯಷ್ಟು ಫಲವನ್ನು ನೀಡುವಂತಹದ್ದಾಗಿದೆ
  • ತುಳಸಿ ಸೇವನೆಯಿಂದ ಶರೀರ ಸ್ವಸ್ಥ ಹಾಗು ಸುಂದರವಾದ ಮೈಕಟ್ಟನ್ನು ಹೊಂದುತ್ತದೆ, ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಲ್ಲಿ ಇದು ರಾಮಬಾಣ ಔಷಧಿಯೆಂದು ಸಿದ್ಧವಾಗಿದೆ
  • ಕುತ್ತಿಗೆಯಲ್ಲಿ ತುಳಸಿಯ ಮಾಲೆಯನ್ನು ಧರಿಸುವದರಿಂದ ಜೀವನಶಕ್ತಿ ಹೆಚ್ಚಾಗುತ್ತದೆ. ಅವಶ್ಯಕವಾದ ಆಕ್ಯುಪ್ರೆಶರ್ ಬಿಂದುಗಳ ಮೇಲೆ ಒತ್ತಡ ಬೀಳುತ್ತದೆ ಇದರಿಂದಾಗಿ ಮಾನಸಿಕ ಒತ್ತಡಗಳಲ್ಲಿ ಲಾಭವಾಗುತ್ತದೆ, ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಾಗುತ್ತದೆ ಹಾಗು ಶರೀರದ ಸ್ವಾಸ್ಥ್ಯ ಸುಧಾರಿಸಿ ದೀರ್ಘಾಯು ಪ್ರಾಪ್ತಿಯಾಗುತ್ತದೆ. ಇದನ್ನು ಧರಿಸುವದರಿಂದ ಶರೀರದಲ್ಲಿ ವಿದ್ಯುತ ಶಕ್ತಿಯ ಪ್ರವಾಹವು ಬೆಳೆಯುತ್ತದೆ ಹಾಗು ಜೀವ ಕೋಶಗಳ ಮುಖಾಂತರ ಧಾರಣಶಕ್ತಿಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ಕುತ್ತಿಗೆಯಲ್ಲಿ ಹಾರವನ್ನು ಧರಿಸುವದರಿಂದ ವಿದ್ಯುತ ನ ಅಲೆಗಳು ಹೊರಬಿದ್ದು ರಕ್ತಸಂಚಾರ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುತ್ತವೆ. ಪ್ರಭಲ ವಿದ್ಯುತ ಶಕ್ತಿಯಿಂದಾಗಿ ಧರಿಸುವವರ ಮೇಲೆ ಚುಂಬಕೀಯ ಮಂಡಲವು ಚಾಲನೆಯಲ್ಲಿರುತ್ತದೆ, ತುಳಸಿ ಮಾಲೆ ಧರಿಸುವದರಿಂದ ಧ್ವನಿಯು ಸುಮಧರವಾಗುತ್ತದೆ, ಗಂಟಲಿನ ರೋಗಗಳಾಗುವದಿಲ್ಲ, ಮುಖವು ಬೆಳ್ಳಗೆ ಗುಲಾಬಿ ವರ್ಣದ್ದಾಗಿರುತ್ತದೆ. ಹೃದಯದ ಮೆಲೆ ನೇತಾಡುವ ತುಳಸಿ ಮಾಲೆಯು ಶ್ವಾಸ ಕೋಶ, ಹಾಗು ಹೃದಯ ರೋಗಗಳಿಂದ ರಕ್ಷಿಸುತ್ತದೆ. ಇದನ್ನು ಧರಿಸುವ ವರಲ್ಲಿ ಸಾತ್ವಿಕ ಸ್ವಭಾವದ ಸಂಚಾರವಾಗುತ್ತದೆ. ಯಾವ ಮನುಷ್ಯ ತುಳಸಿ ಕಟ್ಟಿಗೆಯಿಂದ ತಯಾರಾದ ಮಾಲೆಯನ್ನು ಭಗವಾನ ವಿಷ್ಣುವಿಗೆ ಅರ್ಪಿಸಿ ಪ್ರಸಾದ ರೂಪವಾಗಿ ಭಕ್ತಿಯಿಂದ ಧರಿಸುತ್ತಾನೆಯೋ ಅವನ ಅಪರಾಧಗಳು ನಷ್ಟವಾಗುತ್ತವೆ
  • ಮಣಿಕಟ್ಟಿನಲ್ಲಿ ತುಳಸಿಯ ಮಾಲೆಯನ್ನು ಧರಿಸುವದರಿಂದ ನಾಡಿಮಿಡಿತ ತಪ್ಪುವದಿಲ್ಲ, ಕೈಗಳು ಮರಗಟ್ಟುವದಿಲ್ಲ ಹಾಗು ಭುಜಗಳಿಗೆ ಶಕ್ತಿ ಬರುತ್ತದೆ
  • ತುಳಸಿಯ ಬೇರುಗಳನ್ನು ಸೊಂಟಕ್ಕೆ ಕಟ್ಟುವದರಿಂದ ಅದರಲ್ಲೂ ವಿಷೇಶವಾಗಿ ಗರ್ಭಿಣಿಯರಿಗೆ ವಿಷೇಶ ಲಾಭವಾಗುತ್ತದೆ. ಪ್ರಸವ ವೇದನೆ ಕಡಿಮೆಯಾಗುತ್ತದೆ ಹಾಗು ಸುಲಭವಾಗಿ ಆಗುತ್ತದೆ
  • ಸೊಂಟಕ್ಕೆ ತುಳಸಿಯ ಉಡುದಾರವನ್ನು ಕಟ್ಟುವದರಿಂದ ಪಾರ್ಶ್ವವಾಯು ಸಂಭವಿಸುವದಿಲ್ಲ, ಸೊಂಟ, ಯಕೃತ್ತು, ಪ್ಲೀಹ, ಅಮಾಶಯ ಹಾಗು ಸೊಂಟದ ಭಾಗದಲ್ಲಿರುವ ಅಂಗಗಳ ವಿಕಾರಗಳುಂಟಾಗುವದಿಲ್ಲ
  • ತುಳಸಿಯ ಮಾಲೆಯಿಂದ ಜಪವನ್ನು ಮಾಡುವದರಿಂದ ಬೆರಳುಗಳಲ್ಲಿರುವ ಅಕ್ಯುಪ್ರೆಶರ್ ಬಿಂದುಗಳಿಗೆ ಒತ್ತಡ ಬೀಳುವದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ
  • ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ ತುಂಡಾಗಿರುವ ಎಲುಬುಗಳು ಮರು ಜೋಡಣೆಯಾಗುವಲ್ಲಿ ಸಹಾಯಕವಾಗುತ್ತದೆ
  • ತುಳಸಿಯ ಹತ್ತಿರ ಓದುವದು, ಸಚ್ಚಿಂತನೆ ಮಾಡುವದರಿಂದ, ದೀಪವನ್ನು ಹಚ್ಚುವದರಿಂದ ಹಾಗು ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವದರಿಂದ ಐದು ಇಂದ್ರೀಯಗಳ ವಿಕಾರಗಳು ದೂರವಾಗುತ್ತವೆ

ಕಾಮೆಂಟ್‌ಗಳಿಲ್ಲ: