ಶನಿ ಕಾಟದಿಂದ ಮುಕ್ತರಾಗಲು ಉಪಾಯ

ಕೊರಳಲ್ಲಿ ಕೆಂಪು ದಾರದಲ್ಲಿ ಪೋಣಿಸಿದ ರುದ್ರಾಕ್ಷಗಳ ಮಾಲೆಯನ್ನು ಧರಿಸಿರಿ ಹಾಗು ಶನಿ ದೇವರಿಗೆ ಬಿಲ್ವ ಪತ್ರೆಯನ್ನು ಸಮರ್ಪಿಸಿ. ಇದರಿಂದ ಶನಿ ದೇವರು ಶಾಂತರಾಗುತ್ತಾರೆ

ಜ್ವರ

೫೦ಗ್ರಾಮ್ ಒಣ ದ್ರಾಕ್ಷಿಗಳನ್ನು ರಾತ್ರಿಯಿಡಿ ನೆನೆಸಿಡಿ, ಮುಂಜಾನೆ ನೀರಿನಲ್ಲಿ ಕುದಿಸಿ ತಿನ್ನಿರಿ ಹಾಗು ಉಳಿದಿರುವ ನೀರನ್ನು ಕುಡಿಯಿರಿ. ಇದರಿಂದ ಶಕ್ತಿ ಬರುತ್ತದೆ ಹಾಗು ಹೊಸ ರಕ್ತ ತಯಾರಾಗುತ್ತದೆ, ಹೃದಯ ಹಾಗು ಮೆದುಳಿಗೆ ಶಕ್ತಿಯನ್ನು ನೀಡುವದಲ್ಲದೆ ಜ್ವರ ಹೊರಟು ಹೋಗುತ್ತದೆ.

ದಮಾ

೨ ರಿಂದ ೩ ಅಂಜೀರಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ, ಮುಂಜಾನೆ ಅವುಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಿನ್ನಿರಿ ಹಾಗು ಉಳಿದ ನೀರನ್ನು ಕುಡಿಯಿರಿ, ಈ ರೀತಿಯಲ್ಲಿ ೩ -೪ ತಿಂಗಳು ಮಾಡುವದರಿಂದ ದಮಾ ವಾಸಿಯಾಗುತ್ತದೆ.

ಲಕವಾ

ಲಕವಾ ಬಂದ ಸಮಯದಲ್ಲಿ ಜೇನು ತುಪ್ಪದೊಡನೆ ಬೆಳ್ಳುಳ್ಳಿಯನ್ನು ಅರೆದು ತೆಗೆದುಕೊಳ್ಳಬೇಕು, ಲಕವಾದಲ್ಲಿ ಆರಾಮ ಸಿಗುವುದು

ಸುಸ್ತು, ಸಂದು ನೋವುಗಳಲ್ಲಿ

ಆಗಾಗ್ಯೆ ಸುಸ್ತು, ದಣಿವಾಗುತ್ತಿದ್ದರೆ, ಸಂದು ನೋವಿದ್ದಲ್ಲಿ ಊಟ ಮುಗಿಯುವ ಸಮಯದಲ್ಲಿ ಕಾಲು ಚಮಚೆ ಅಜವಾಯಿನ ಅನ್ನು ಕೂಡಿಸಿಕೊಂಡು ಹನುಮಂತನ ಮಂತ್ರವಾದ " ನಾಸೆ ರೋಗ ಹರೇ ಸಬ್ ಪೀರಾ, ಜಪತ ನಿರಂತರ ಹನುಮತ್ ಬೀರಾ" ಸ್ಮರಣೆ ಮಾಡುತ್ತ ಊಟವನ್ನು ಮಾಡಿರಿ. ಇದರಿಂದಾಗಿ ಶರೀರದ ದಣಿವು ಹಾಗು ಸಂದು ನೋವುಗಳಲ್ಲಿ ಆರಾಮ ಸಿಗುವುದು.

ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು

ಎಮ್ಮೆಯ ಹಾಲಿನಲ್ಲಿ ಕಡ್ಲೆ ಬೇಳೆಯನ್ನು ರಾತ್ರಿಯಿಡಿ ನೆನೆಯಿಟ್ಟು ಮುಂಜಾನೆ ಅವುಗಳನ್ನು ಚೆನ್ನಾಗಿ ಅಗೆದು ತಿನ್ನಿರಿ, ಖರ್ಜೂರ ಹಾಗು  ಒಣದ್ರಾಕ್ಷಿಯನ್ನು ತಿನ್ನುವದರಿಂದ ಕೂಡ ದೇಹದ ತೂಕ ಹೆಚ್ಚಾಗುತ್ತದೆ

ಬೊಜ್ಜು

೧ ದೊಡ್ಡದಾದ ನಿಂಬೆ ಹಣ್ಣಿನ ರಸವನ್ನು ಜೇನು ತುಪ್ಪದೊಡನೆ ಊಟವಾದ ಕೂಡಲೆ ಕುಡಿಯಿರಿ, ಮಜ್ಜಿಗೆಯಲ್ಲಿ ತುಳಸಿ ಎಲೆಗಳನ್ನು ಕೂಡಿಸಿಕೊಂಡು ತೆಗೆದುಕೊಳ್ಳುವದರಿಂದ ಬೊಜ್ಜಿನಲ್ಲಿ ಆರಾಮ ಸಿಗುವುದು

ಎಲುಬು ತುಂಡಾದಾಗ

ಎಲುಬುಗಳು ದುರ್ಬಲವಾಗಿದ್ದರೆ ಅಥವಾ ಮುರಿದಿದ್ದರೆ, ಬೆಳ್ಳುಳ್ಳಿಯ ಪಕಳೆಗಳನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು, ಇದರಿಂದಾಗಿ ಎಲುಬುಗಳು ಬೇಗನೆ ಕೂಡಿಕೊಳ್ಳುವವು. ಅಥವಾ ಗೋದಿಯನ್ನು ಹುರಿದು ಹಿಟ್ಟು ಮಾಡಿಟ್ಟುಕೊಳ್ಳಿ ಹಾಗು ಜೇನು ತುಪ್ಪದೊಡನೆ ತಗೆದುಕೊಳ್ಳುವದರಿಂದ ಎಲುಬುಗಳು ಬೇಗನೆ ಕೂಡಿಕೊಳ್ಳುವವು.

ನೆಮ್ಮದಿಯ ನಿದ್ರೆ

 ನೆಮ್ಮದಿಯ ನಿದ್ರೆ ಬರದೆ ಇದ್ದಲ್ಲಿ ತಲೆದಿಂಬಿನ ಹತ್ತಿರ ಕರ್ಪೂರವನ್ನು ಸುಟ್ಟು "ಕಾರದ ಗುಂಜನವನ್ನು ಮಾಡಬೇಕು, ಮುಂಜಾನೆ - ಸಾಯಂಕಾಲ ಕರ್ಪೂರವನ್ನು ಸುಡುವದರಿಂದ ವಾಯುವಿನ ದೋಷ ದೂರವಾಗುವುದು, ಲಕ್ಷ್ಮಿ ಪ್ರಾಪ್ತಿಯಾಗುವುದು, ಕೆಟ್ಟ ಕನಸುಗಳು ಬೀಳುವದಿಲ್ಲ

ಕಾಲ ಸರ್ಪಯೋಗ

ಕಾಲ ಸರ್ಪಯೋಗವಿದ್ದಲ್ಲಿ (ಮೃತ್ಯು ಯೋಗ) ನೀರಿನಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿರಿ ಹಾಗು ಆ ನೀರನ್ನು ಅಚಮನ ಮಾಡಿ ಮತ್ತು ತಮ್ಮ ಮೇಲೆ ಸಿಂಪಡಿಸಿಕೊಳ್ಳಿ, ಸ್ವಸ್ತಿಕ ಅನ್ನು ಮನೆಯಲ್ಲಿಟ್ಟುಕೊಳ್ಳಿ

ಮಹಾಮೃತ್ಯುಂಜಯ ಮಂತ್ರ


ॐ ಹೂಂ ಜುಂ ಸಃ ।ॐ ಭುರ್ಭವ ಸ್ವಃ । ॐ ತ್ರೈಂಬಕಂ ಯಜಾಮಹೇ ಸುಗಂಧಿ ಪುಷ್ಟಿಮರ್ದನಂ । ಉರ್ವಾರಿಮಿವ ಬಂಧಾನತಮೃತ್ಯೋಮುಕ್ಷೀಯ ಮಾಮೃತಾತ । ಸ್ವಃ ಭುವಃ ಭುಃ ॐ । ಜುಂ ಹೋಂ ॐ ।

ಬ್ಲಡ್ ಪ್ರೆಶರ್ (ರಕ್ತದೊತ್ತಡ)

ಬೆಳ್ಳುಳ್ಳಿಯನ್ನು ಅರೆದು ಹಾಲಿನ ಜೊತೆ ಕುಡಿಯುವದರಿಂದ ಬ್ಲಡ್ ಪ್ರೆಶರ್ ಆರಾಮ ಸಿಗುವುದು

ಹೃದಯ ರೋಗ

ಹೃದಯ ರೋಗದಲ್ಲಿ ೨ ಚಮಚೆ ಜೇನು ತುಪ್ಪ, ೧ ಚಮಚೆ ನಿಂಬೆ ರಸದ ಜೊತೆಯಲ್ಲಿ ಕುಡಿಯುವದರಿಂದ ಹೃದಯ ರೋಗದಲ್ಲಿ ಕೂಡಲೆ ಆರಾಮ ಸಿಗುತ್ತದೆ, ಅಥವಾ ಹಸಿ ಶುಂಠಿಯ ರಸದೊಡನೆ ಅಷ್ಟೆ ಪ್ರಮಾಣದ ನೀರಿನೊಡನೆ ಕೂಡಿಸಿಕೊಂಡು ಕುಡಿಯಿರಿ.

ಹೃದಯ ಬೇನೆ ಅಥವಾ ಹಾರ್ಟ ಅಟ್ಯಾಕ್ ನ ಭಯವಿದ್ದಲ್ಲಿ ತುಳಸಿಯ ೮ -೧೦ ಎಲೆ ಹಾಗು ೨ - ೩ ಕರಿಮೆಣಸಿನ ಜೊತೆ ಅಗೆದು ತಿಂದು ನೀರುಕುಡಿಯಿರಿ, ಇದು ಅದ್ಭುತ ಪರಿಣಾಮ ಬೀರುವುದು.

 ತುಳಸಿಯ ೧೦ -೨೦ ಎಲೆಗಳ ರಸವನ್ನು ಬಿಸಿ ಮಾಡಿ ಉಗುರು ಬೆಚ್ಚಗಿನ ನೀರಿನ ಜೊತೆ ಕುಡಿಯಿರಿ ಹಾಗು ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ಹೃದಯ ಭಾಗದ ಮೇಲೆ ಹಚ್ಚಿಕೊಳ್ಳಿರಿ

ಬಾಯಿ ಹುಣ್ಣು

ಮುಂಜಾನೆ ಹಸಿವಾದಾಗ ೧೦ ಗ್ರಾಮ ಆಕಳಿನ ತುಪ್ಪವನ್ನು ಬಾಯಲ್ಲಿಟ್ಟುಕೊಳ್ಳಿ, ಇದರಿಂದಾಗಿ ಕಣ್ಣುಗಳ ದೃಷ್ಟಿ ಶಕ್ತಿಯುತವಾಗುವವು ಹಾಗು ಬಾಯಿ ಹುಣ್ಣು ಶಮನವಾಗುವುದು.
ತ್ರಿಫಳಾ ನೀರಿನಿಂದ ಬಾಯಿಮುಕ್ಕುಳಿಸಿರಿ

ಗೋಝರಣ

  • ಚಲಿಗಾಲದಲ್ಲಿ ಗೋಝರಣ ಅನ್ನು ಕುಡಿಯುವದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಇದರಿಂದಾಗಿ ಕಿಡ್ನಿ, ಹಾಗು ಲೀವರ್ ಉತ್ಕೃಷ್ಟವಾಗಿರುತ್ತದೆ. ಬೇಸಿಗೆಯಲ್ಲಿ ಇದನ್ನು ತೆಗೆದುಕೊಳ್ಳಬೇಡಿ ಇದು ಉಷ್ಣವನ್ನುಂಟು ಮಾಡುತ್ತದೆ
  • ತಲೆಯಲ್ಲಿ ಹೇನುಗಳಾಗಿದ್ದರೆ ಶ್ಯಾಂಪು ನ ಬದಲಾಗಿ ಗೋಝರಣ ಅನ್ನು ಹಚ್ಚಿರಿ, ಶ್ಯಾಂಪುಗಿಂತಲೂ ಇದು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ, ಹೇನುಗಳು ಇಲ್ಲವಾಗುತ್ತವೆ. ಗೋಝರಣ ಅನ್ನು ಕೂದಲುಗಳಿಗೆ ಹಚ್ಚಿ ೧ ರಿಂದ ೨ ನಿಮಿಷಗಳವರೆಗೆ ಬಿಟ್ಟು ನಂತರ ಸ್ನಾನ ಮಾಡಿರಿ

ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಕಾಳು

  • ತಲೆ ತಿರುಗುವ ಕಾಯಿಲೆಯಿಂದ ಬಳಲುವವರು, ನಿಶ್ಯಕ್ತಿಯುಳ್ಳವರು ಅಥವಾ ನಿದ್ದೆಯ ತೊಂದರೆ ಇರುವಂಥವರು ಸೊಂಪು ಹಾಗು ಕಲ್ಲು ಸಕ್ಕರೆಯ ಮಿಶ್ರಣವನ್ನು ಸಮಪ್ರಮಾಣದಲ್ಲಿಟ್ಟುಕೊಳ್ಳಿ. ಊಟವಾದ ನಂತರ ೨ ಚಮಚೆಯಷ್ಟು ಮಿಶ್ರಣವನ್ನು ಚೆನ್ನಾಗಿ ಅಗೆದು ತಿನ್ನಿರಿ. ೧ ರಿಂದ ೨ ತಿಂಗಳುಗಳವವರೆಗೆ ತಿನ್ನುವದರಿಂದ ಮೆದುಳಿನ ನಿಶಕ್ತಿತನ ಕಡಿಮೆಯಾಗುತ್ತದೆ ಹಾಗು ಕಣ್ಣಿನ ಶಕ್ತಿ ಬೆಳೆಯುತ್ತದೆ 
  • ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಇವುಗಳನ್ನು ಸಮಪ್ರಮಾಣದಲ್ಲಿ ಚೂರ್ಣ ಮಾಡಿಕೊಂಡು ೬ - ೬ ಗ್ರಾಮನಂತೆ ಊಟವಾದ ನಂತರ ಚೆನ್ನಾಗಿ ಅಗೆದು ತಿನ್ನುವದರಿಂದ ಕೈ ಕಾಲುಗಳ ಉರಿತ, ಎದೆಯುರಿತ, ಕಣ್ಣುಗಳ ಉರಿತ, ಮೂತ್ರ ವಿಸರ್ಜಿಸುವಾಗ ಆಗುವ ಉರಿತ ಹಾಗು ತಲೆ ನೋವುಗಳಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದು

ಒಂದು ವೇಳೆ ನೀವು ಒಬ್ಬಂಟಿಗರಾದಲ್ಲಿ

ಕೆಲವೊಂದು ಪ್ರಸಂಗಗಳಲ್ಲಿ ನೀವೊಂದೆಡೆ ಹಾಗು ಸಮಾಜ ಒಂದೆಡೆ ಆದಾಗ ಕಿರು ಬೆರಳನ್ನು ಭ್ರೂಮಧ್ಯದ ಮೇಲೆ ಹಾಗು ಎರಡನೆ ಬೆರಳು ಹಾಗು ಹೆಬ್ಬಟ್ಟನಿಂದ ಮೂಗಿನೆಡೆ ಬರುವ ನಾಡಿಗಳನ್ನು ಹಿಡಿದು ಓಂ ಶಾಂತಿ..... ಓಂ ಪರಮಾತ್ಮನೆ ನಮಃ....... ಸತ್ಯಂ ಪರಮ ಧೀಮಹಿ ಎಂದ ಮೇಲೆ ನಿಮ್ಮ ಗುರು ಮಂತ್ರವನ್ನು ಜಪಿಸಿರಿ, ಇದರಿಂದಾಗಿ ಅಂತಃ ಪ್ರೇರಣೆ ಅವಶ್ಯವಾಗಿ ಸಿಗುತ್ತದೆ

ಹುಟ್ಟಿದ ಮಗು ದುರ್ಬಲವಾಗಿದ್ದರೆ

ಮಗುವಿನ ತಾಯಿಯು ಎಮ್ಮೆ ಅಥವಾ ಹಸುವಿನ ಹಾಲು ಹಾಗು ತುಪ್ಪವನ್ನು ತೆಗೆದುಕೊಳ್ಳಬೇಕು ಅಲ್ಲದೆ ಊಟವಾದ ನಂತರ ಸೇಬು ಹಾಗು ಬಾಳೆ ಹಣ್ಣು ತಿನ್ನುವದರಿಂದ ಮಗು ಆರೋಗ್ಯವಂತನಾಗುತ್ತದೆ.
ಗರ್ಭಿಣಿಯು ಚಂದ್ರ ಹಾಗು ಸೂರ್ಯನ ಕಿರಣಗಳು ನಾಭಿಯ ಮೇಲೆ ಬೀಳುವಂತೆ ಕುಳಿತುಕೊಳ್ಳಬೇಕು, ಇದರಿಂದ ಕೂಡ ಹುಟ್ಟುವ ಮಗು ಆರೋಗ್ಯವಂತವಾಗಿರುವತ್ತದೆ

ಒಳ್ಳೆಯ ವರ ಸಿಗಬೇಕೆಂದರೆ

ಸುಯೋಗ್ಯನಾದ ವರನ ಆಕಾಂಕ್ಷೆ ಇರುವ ಕನ್ಯಯು ಪಾರ್ವತಿಯ ಮುಂದೆ ಈ ಶ್ಲೋಕವನ್ನು ಹೇಳಬೇಕು
" ಜಯ ಜಯ ಗಿರಿವರ ರಾಜಕಿಶೋ ಜಯ ಮಹೇಶ ಮುಖ ಚಂದ್ರ ಚಕೋರಿ"

ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಲು

ಪ್ರತಿ ಅಮವಾಸ್ಯ ಅಥವಾ ೧೫ ದಿನಗಳಿಗೊಮ್ಮೆ ಕಲ್ಲುಪ್ಪು ಬೆರೆಸಿದ ನೀರಿನಿಂದ ಮನೆಯನ್ನು ಒರೆಸಿರಿ (ಒಂದು ಲೀಟರ ನೀರಿನಲ್ಲಿ ೫೦ ಗ್ರಾಮ ಕಲ್ಲುಪ್ಪು), ಇದರಿಂದಾಗಿ ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೋಗುತ್ತದೆ. ಅಥವಾ ಕಲ್ಲುಪ್ಪಿನ ಸ್ಥಾನದಲ್ಲಿ ಗೋಝರಣದ ಅರ್ಕ ಅನ್ನೂ ಕೂಡ ಬಳಸಬಹುದು