ನೆಮ್ಮದಿಯ ನಿದ್ರೆ ಬರದೆ ಇದ್ದಲ್ಲಿ ತಲೆದಿಂಬಿನ ಹತ್ತಿರ ಕರ್ಪೂರವನ್ನು ಸುಟ್ಟು "ॐ" ಕಾರದ ಗುಂಜನವನ್ನು ಮಾಡಬೇಕು, ಮುಂಜಾನೆ - ಸಾಯಂಕಾಲ ಕರ್ಪೂರವನ್ನು ಸುಡುವದರಿಂದ ವಾಯುವಿನ ದೋಷ ದೂರವಾಗುವುದು, ಲಕ್ಷ್ಮಿ ಪ್ರಾಪ್ತಿಯಾಗುವುದು, ಕೆಟ್ಟ ಕನಸುಗಳು ಬೀಳುವದಿಲ್ಲ
ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಾಲ ಸರ್ಪಯೋಗ
ಕಾಲ ಸರ್ಪಯೋಗವಿದ್ದಲ್ಲಿ (ಮೃತ್ಯು ಯೋಗ) ನೀರಿನಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿರಿ ಹಾಗು ಆ ನೀರನ್ನು ಅಚಮನ ಮಾಡಿ ಮತ್ತು ತಮ್ಮ ಮೇಲೆ ಸಿಂಪಡಿಸಿಕೊಳ್ಳಿ, ಸ್ವಸ್ತಿಕ ಅನ್ನು ಮನೆಯಲ್ಲಿಟ್ಟುಕೊಳ್ಳಿ
ಮಹಾಮೃತ್ಯುಂಜಯ ಮಂತ್ರ
ॐ ಹೂಂ ಜುಂ ಸಃ ।ॐ ಭುರ್ಭವ ಸ್ವಃ । ॐ ತ್ರೈಂಬಕಂ ಯಜಾಮಹೇ ಸುಗಂಧಿ ಪುಷ್ಟಿಮರ್ದನಂ । ಉರ್ವಾರಿಮಿವ ಬಂಧಾನತಮೃತ್ಯೋಮುಕ್ಷೀಯ ಮಾಮೃತಾತ । ಸ್ವಃ ಭುವಃ ಭುಃ ॐ । ಜುಂ ಹೋಂ ॐ ।
ಹೃದಯ ರೋಗ
ಹೃದಯ ರೋಗದಲ್ಲಿ ೨ ಚಮಚೆ ಜೇನು ತುಪ್ಪ, ೧ ಚಮಚೆ ನಿಂಬೆ ರಸದ ಜೊತೆಯಲ್ಲಿ ಕುಡಿಯುವದರಿಂದ ಹೃದಯ ರೋಗದಲ್ಲಿ ಕೂಡಲೆ ಆರಾಮ ಸಿಗುತ್ತದೆ, ಅಥವಾ ಹಸಿ ಶುಂಠಿಯ ರಸದೊಡನೆ ಅಷ್ಟೆ ಪ್ರಮಾಣದ ನೀರಿನೊಡನೆ ಕೂಡಿಸಿಕೊಂಡು ಕುಡಿಯಿರಿ.
ಹೃದಯ ಬೇನೆ ಅಥವಾ ಹಾರ್ಟ ಅಟ್ಯಾಕ್ ನ ಭಯವಿದ್ದಲ್ಲಿ ತುಳಸಿಯ ೮ -೧೦ ಎಲೆ ಹಾಗು ೨ - ೩ ಕರಿಮೆಣಸಿನ ಜೊತೆ ಅಗೆದು ತಿಂದು ನೀರುಕುಡಿಯಿರಿ, ಇದು ಅದ್ಭುತ ಪರಿಣಾಮ ಬೀರುವುದು.
ತುಳಸಿಯ ೧೦ -೨೦ ಎಲೆಗಳ ರಸವನ್ನು ಬಿಸಿ ಮಾಡಿ ಉಗುರು ಬೆಚ್ಚಗಿನ ನೀರಿನ ಜೊತೆ ಕುಡಿಯಿರಿ ಹಾಗು ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ಹೃದಯ ಭಾಗದ ಮೇಲೆ ಹಚ್ಚಿಕೊಳ್ಳಿರಿ
ಹೃದಯ ಬೇನೆ ಅಥವಾ ಹಾರ್ಟ ಅಟ್ಯಾಕ್ ನ ಭಯವಿದ್ದಲ್ಲಿ ತುಳಸಿಯ ೮ -೧೦ ಎಲೆ ಹಾಗು ೨ - ೩ ಕರಿಮೆಣಸಿನ ಜೊತೆ ಅಗೆದು ತಿಂದು ನೀರುಕುಡಿಯಿರಿ, ಇದು ಅದ್ಭುತ ಪರಿಣಾಮ ಬೀರುವುದು.
ತುಳಸಿಯ ೧೦ -೨೦ ಎಲೆಗಳ ರಸವನ್ನು ಬಿಸಿ ಮಾಡಿ ಉಗುರು ಬೆಚ್ಚಗಿನ ನೀರಿನ ಜೊತೆ ಕುಡಿಯಿರಿ ಹಾಗು ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ಹೃದಯ ಭಾಗದ ಮೇಲೆ ಹಚ್ಚಿಕೊಳ್ಳಿರಿ
ಗೋಝರಣ
- ಚಲಿಗಾಲದಲ್ಲಿ ಗೋಝರಣ ಅನ್ನು ಕುಡಿಯುವದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಇದರಿಂದಾಗಿ ಕಿಡ್ನಿ, ಹಾಗು ಲೀವರ್ ಉತ್ಕೃಷ್ಟವಾಗಿರುತ್ತದೆ. ಬೇಸಿಗೆಯಲ್ಲಿ ಇದನ್ನು ತೆಗೆದುಕೊಳ್ಳಬೇಡಿ ಇದು ಉಷ್ಣವನ್ನುಂಟು ಮಾಡುತ್ತದೆ
- ತಲೆಯಲ್ಲಿ ಹೇನುಗಳಾಗಿದ್ದರೆ ಶ್ಯಾಂಪು ನ ಬದಲಾಗಿ ಗೋಝರಣ ಅನ್ನು ಹಚ್ಚಿರಿ, ಶ್ಯಾಂಪುಗಿಂತಲೂ ಇದು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ, ಹೇನುಗಳು ಇಲ್ಲವಾಗುತ್ತವೆ. ಗೋಝರಣ ಅನ್ನು ಕೂದಲುಗಳಿಗೆ ಹಚ್ಚಿ ೧ ರಿಂದ ೨ ನಿಮಿಷಗಳವರೆಗೆ ಬಿಟ್ಟು ನಂತರ ಸ್ನಾನ ಮಾಡಿರಿ
ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಕಾಳು
- ತಲೆ ತಿರುಗುವ ಕಾಯಿಲೆಯಿಂದ ಬಳಲುವವರು, ನಿಶ್ಯಕ್ತಿಯುಳ್ಳವರು ಅಥವಾ ನಿದ್ದೆಯ ತೊಂದರೆ ಇರುವಂಥವರು ಸೊಂಪು ಹಾಗು ಕಲ್ಲು ಸಕ್ಕರೆಯ ಮಿಶ್ರಣವನ್ನು ಸಮಪ್ರಮಾಣದಲ್ಲಿಟ್ಟುಕೊಳ್ಳಿ. ಊಟವಾದ ನಂತರ ೨ ಚಮಚೆಯಷ್ಟು ಮಿಶ್ರಣವನ್ನು ಚೆನ್ನಾಗಿ ಅಗೆದು ತಿನ್ನಿರಿ. ೧ ರಿಂದ ೨ ತಿಂಗಳುಗಳವವರೆಗೆ ತಿನ್ನುವದರಿಂದ ಮೆದುಳಿನ ನಿಶಕ್ತಿತನ ಕಡಿಮೆಯಾಗುತ್ತದೆ ಹಾಗು ಕಣ್ಣಿನ ಶಕ್ತಿ ಬೆಳೆಯುತ್ತದೆ
- ಸೊಂಪು, ಕಲ್ಲು ಸಕ್ಕರೆ ಹಾಗು ಕೊತಂಬರಿ ಇವುಗಳನ್ನು ಸಮಪ್ರಮಾಣದಲ್ಲಿ ಚೂರ್ಣ ಮಾಡಿಕೊಂಡು ೬ - ೬ ಗ್ರಾಮನಂತೆ ಊಟವಾದ ನಂತರ ಚೆನ್ನಾಗಿ ಅಗೆದು ತಿನ್ನುವದರಿಂದ ಕೈ ಕಾಲುಗಳ ಉರಿತ, ಎದೆಯುರಿತ, ಕಣ್ಣುಗಳ ಉರಿತ, ಮೂತ್ರ ವಿಸರ್ಜಿಸುವಾಗ ಆಗುವ ಉರಿತ ಹಾಗು ತಲೆ ನೋವುಗಳಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದು
ಹುಟ್ಟಿದ ಮಗು ದುರ್ಬಲವಾಗಿದ್ದರೆ
ಮಗುವಿನ ತಾಯಿಯು ಎಮ್ಮೆ ಅಥವಾ ಹಸುವಿನ ಹಾಲು ಹಾಗು ತುಪ್ಪವನ್ನು ತೆಗೆದುಕೊಳ್ಳಬೇಕು ಅಲ್ಲದೆ ಊಟವಾದ ನಂತರ ಸೇಬು ಹಾಗು ಬಾಳೆ ಹಣ್ಣು ತಿನ್ನುವದರಿಂದ ಮಗು ಆರೋಗ್ಯವಂತನಾಗುತ್ತದೆ.
ಗರ್ಭಿಣಿಯು ಚಂದ್ರ ಹಾಗು ಸೂರ್ಯನ ಕಿರಣಗಳು ನಾಭಿಯ ಮೇಲೆ ಬೀಳುವಂತೆ ಕುಳಿತುಕೊಳ್ಳಬೇಕು, ಇದರಿಂದ ಕೂಡ ಹುಟ್ಟುವ ಮಗು ಆರೋಗ್ಯವಂತವಾಗಿರುವತ್ತದೆ
ಗರ್ಭಿಣಿಯು ಚಂದ್ರ ಹಾಗು ಸೂರ್ಯನ ಕಿರಣಗಳು ನಾಭಿಯ ಮೇಲೆ ಬೀಳುವಂತೆ ಕುಳಿತುಕೊಳ್ಳಬೇಕು, ಇದರಿಂದ ಕೂಡ ಹುಟ್ಟುವ ಮಗು ಆರೋಗ್ಯವಂತವಾಗಿರುವತ್ತದೆ
ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಲು
ಪ್ರತಿ ಅಮವಾಸ್ಯ ಅಥವಾ ೧೫ ದಿನಗಳಿಗೊಮ್ಮೆ ಕಲ್ಲುಪ್ಪು ಬೆರೆಸಿದ ನೀರಿನಿಂದ ಮನೆಯನ್ನು ಒರೆಸಿರಿ (ಒಂದು ಲೀಟರ ನೀರಿನಲ್ಲಿ ೫೦ ಗ್ರಾಮ ಕಲ್ಲುಪ್ಪು), ಇದರಿಂದಾಗಿ ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೋಗುತ್ತದೆ. ಅಥವಾ ಕಲ್ಲುಪ್ಪಿನ ಸ್ಥಾನದಲ್ಲಿ ಗೋಝರಣದ ಅರ್ಕ ಅನ್ನೂ ಕೂಡ ಬಳಸಬಹುದು
ಹ್ರದಯವನ್ನು ಗಟ್ಟಿಮುಟ್ಟಾಗಿಡಲು
ಹ್ರದಯವನ್ನು ಗಟ್ಟಿಮುಟ್ಟಾಗಿಡಲು ದಾಲಚಿನ್ನಿ (ಚಕ್ಕೆ) ಯನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು.
ಸೂಚನೆ: ದಾಲಚಿನ್ನಿಯ ಒಂದು ಚೂರು ಮೂರು ದಿನಗಳವರೆಗೆ ಬಳಸಬಹುದು
ಸೂಚನೆ: ದಾಲಚಿನ್ನಿಯ ಒಂದು ಚೂರು ಮೂರು ದಿನಗಳವರೆಗೆ ಬಳಸಬಹುದು
ನರ ನಾಡಿಗಳ ದೌರ್ಬಲ್ಯ
ನರ ನಾಡಿಗಳು ದುರ್ಬಲವಾಗಿದ್ದರೆ ೧ ರಿಂದ ೩ ಗ್ರಾಮ್ (ಅನುಕೂಲಕ್ಕೆ ತಕ್ಕಂತೆ) ಅಶ್ವಗಂಧ ಚೂರ್ಣವನ್ನು ೧೦ ಗ್ರಾಮ ನೀರಿನಲ್ಲಿ ಕುದಿಸಿ ಹಾಲಿನಲ್ಲಿ ಹಾಕಿಕೊಂಡು ಕುಡಿಯಿರಿ
ಚಿಕುನ ಗುನ್ಯಾ
ತುಳಸಿ ಹಾಗು ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿಡಿ, ಸೆಗಣಿಯ ಬೆರಣಿಗಳ ಮೇಲೆ ಬೇವಿನ ಎಲೆ ಹಾಗು ಆಕಳಿನ ತುಪ್ಪದ ಕೆಲವೊಂದು ಹನಿಗಳನ್ನು ಹಾಕಿ ಹೊಗೆಯನ್ನು ಮಾಡಿ ಮನೆ ತುಂಬ ಹರಡಿರಿ. ಇದರಲ್ಲಿ ಪ್ರಾಣಾಯಾಮ ಮಾಡಿರಿ. ಗೌಚಂದನದ ಧೂಪವನ್ನು ಹಚ್ಚಿರಿ, ಬೇವು ಹಾಗು ಅಶೊಕ ವ್ರಕ್ಷದ ಎಲೆಗಳ ತೋರಣವನ್ನು ಮನೆಯ ಮುಖ್ಯ ಬಾಗಿಲಿಗೆ ಕಟ್ಟಿರಿ
ನೆನಪಿನ ಶಕ್ತಿ ಹಾಗು ಬಲವನ್ನು ಹೆಚ್ಚಿಸಿಕೊಳ್ಳಲು
ಗೋಡಂಬಿ (ಮಕ್ಕಳಿಗೆ ೩ / ದೊಡ್ಡವರಿಗೆ ೫) ಯ ಮೇಲೆ ಜೇನು ತುಪ್ಪವನ್ನು ಸವರಿಕೊಂಡು ಚೆನ್ನಾಗಿ ಅಗೆದು ತಿನ್ನಿರಿ, ಇದರಿಂದಾಗಿ ನೆನಪಿನ ಶಕ್ತಿ ಹಾಗು ಬಲ ಹೆಚ್ಚಾಗುತ್ತದೆ, ಹೊಟ್ಟೆಗೆ ಸಂಬಂಧಿಸಿದ ವಾಯುವಿನ ತೊಂದರೆಗಳು ದೂರವಾಗುತ್ತವೆ
ಶಕ್ತಿ ಸಂವರ್ಧಕ ಆಹಾರ
ಸಜ್ಜೆಯ ಹಿಟ್ಟಿನಲ್ಲಿ ಎಳ್ಳನ್ನು ಸೇರಿಸಿ ಮಾಡುವ ರೊಟ್ಟಿಯ ಜೊತೆ ಹಳೆಯ ಬೆಲ್ಲ ಅಥವಾ ತುಪ್ಪದ ಜೊತೆ ತಿನ್ನಬೇಕು, ಇದು ಒಂದು ಉತ್ತಮ ಶಕ್ತಿ ಸಂವರ್ಧನೆಯ ಆಹಾರವಾಗಿದೆ, ೧೦೦ ಗ್ರಾಮ ಸಜ್ಜೆಯಿಂದ ೪೫ ಮಿಗ್ರಾಂ ಕ್ಯಾಲ್ಶಿಯಂ, ೫ ಮಿಗ್ರಾಂ ಲೋಹಗಳು, ೩೬೧ ಗ್ರಾಂ ಕ್ಯಾಲೋರಿ ಶಕ್ತಿ ಸಿಗುತ್ತದೆ, ಎಳ್ಳು ಹಾಗು ಬೆಲ್ಲದಲ್ಲೂ ಕೂಡ ಕ್ಯಾಲ್ಶಿಯಂ ಹಾಗು ಲೋಹಗಳ ಪ್ರಮಾಣ ವಿಫುಲವಾಗಿದೆ
ಸ್ಪೂರ್ತಿದಾಯಕ ಪೇಯ
ಎರಡು ಚಮಚೆ ಮೆಂಥೆ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡಿ ನೆನೆಸಿಡಿ, ಮುಂಜಾನೆ ಸಣ್ಣನೆಯ ಉರಿಯಲ್ಲಿ ನಾಲ್ಕಾಂಶ ನೀರು ಉಳಿಯುವ ತನಕ ಕುದಿಸಿರಿ, ಉಗುರು ಬೆಚ್ಚಗಿರುವಾಗಲೆ ಸೋಸಿಕೊಂಡು ಜೇನುತುಪ್ಪದೊಡನೆ ಕುಡಿಯಿರಿ, ದಿನವಿಡಿ ಶಕ್ತಿ ಹಾಗು ಸ್ಪೂರ್ತಿ ತುಂಬಿತುಳುಕುವುದು
ಹಲ್ಲು
ಮನೆಯಲ್ಲಿಯೇ ಹಲ್ಲು ಪುಡಿ ತಯಾರಿಸಬಹುದಾದ ವಿಧಾನ:
ಬಳಸುವ ವಿಧಾನ:
- ಶುಂಠಿ, ಕರಿ ಮೆಣಸು, ಪುದೀನ, ಅಳಲೆ, ತಾರೆಕಾಯಿ, ನೆಲ್ಲಿಕಾಯಿ, ದಾಲ್ಚಿನ್ನಿ (ಚಕ್ಕೆ), ಕಡುವಾಗಿರುವ ದಾಲ್ಚಿನ್ನಿ ಹಾಗು ಏಲಕ್ಕಿಯನ್ನು ಸಮಭಾಗದಲ್ಲಿ ತಯಾರಿಸಿಕೊಂಡ ಚೂರ್ಣದಲ್ಲಿ ಸ್ವಲ್ಪ ಸೈಂಧವ ಉಪ್ಪು ಹಾಗು ಎಳ್ಳೆಣ್ಣೆಯನ್ನು ಕೂಡಿಸಿ ’ದಂತಶೋಧಕ ಪೇಸ್ಟ’ ಅನ್ನು ತಯಾರಿಸಿ.
ಬಳಸುವ ವಿಧಾನ:
- ಕೋಮಲವಾದ ಬೇವಿನ ಕಡ್ಡಿಯಿಂದ ಅಥವಾ ತೊರಬೆರಳಿನಿಂದ ವಸಡುಗಳಿಗೆ ಹಾನಿಯಾಗದಂತೆ ಹಲ್ಲುಗಳನ್ನು ತಿಕ್ಕಿರಿ, ಇದರಿಂದಾಗಿ ಬಾಯಿಯ ದುರ್ಗಂಧ, ಕಲ್ಮಷ ಹಾಗು ಕಫ ಹೊರ ಹೋಗುತ್ತದೆಯಲ್ಲದೆ ಮುಖದಲ್ಲಿ ನಿರ್ಮಲತೆ, ಆಹಾರದ ರುಚಿ ಮತ್ತು ಮನಸ್ಸು ಪ್ರಸನ್ನವಾಗಿರುತ್ತದೆ
- ಹಲ್ಲುಗಳನ್ನು ತಿಕ್ಕಿದ ಮೇಲೆ ಕೋಮಲವಾದ ಬೇವಿನ ಕಡ್ಡಿಯನ್ನು ಎರಡು ತುಂಡುಗಳನ್ನಾಗಿಸಿ ಅದರಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿ
- ದಿನದಲ್ಲಿ ಎರಡು ಬಾರಿ ಹಲ್ಲುಗಳನ್ನು ತಿಕ್ಕಿರಿ, ಊಟವಾದ ನಂತರ ಹಾಗು ಯಾವುದೆ ಖಾದ್ಯ-ಪೇಯವನ್ನು ತಿಂದ ನಂತರ ಹಲ್ಲು ಹಾಗು ನಾಲಿಗೆಯನ್ನು ಅವಶ್ಯವಾಗಿ ಸ್ವಚ್ಛಗೊಳಿಸಬೇಕು
ದ್ರವ್ಯಗಳನ್ನು ಬಾಯಲ್ಲಿ ಕೆಲವು ಸಮಯದ ತನಕ ಇಟ್ಟುಕೊಂಡು ನಂತರ ಉಗುಳುವುದನ್ನು ಗಂಡೂಷ ಧಾರಣ ಮಾಡುವುದು ಎನ್ನುತ್ತಾರೆ. ತ್ರಿಫಳಾ ಚೂರ್ಣವನ್ನು ರಾತ್ರಿಯಲ್ಲಿ ನೆನೆಯಿಡಬೇಕು, ಮುಂಜಾನೆ ಅದನ್ನು ಸೋಸಿ ಅದರಿಂದ ಬಾಯಿ ಮುಕ್ಕಳಿಸಬೇಕು. ಹಲ್ಲು ತಿಕ್ಕಿದ ನಂತರ ಗಂಡೂಷ ಧಾರಣೆ ಮಾಡುವದರಿಂದ ಅರುಚಿ, ಬಾಯಿಯ ದುರ್ಘಂಧ, ವಸಡುಗಳ ತೊಂದರೆ ದೂರವಾಗುತ್ತದೆ. ಬಾಯಿ ಹಗುರಾಗುತ್ತದೆ. ಉಗುರು ಬೆಚ್ಚಗಿನ ಎಳ್ಳೆಣ್ಣೆಯಿಂದ ಗಂಡೂಷ ಧಾರಣೆ ಮಾಡುವದರಿಂದ ಸ್ವರ ಕೋಮಲವಾಗುತ್ತದೆ, ಹಲ್ಲು ಹಾಗು ವಸಡುಗಳು ವ್ರದ್ಧಾವಸ್ಥೆಯಲ್ಲೂ ಗಟ್ಟಿಯಾಗಿರುತ್ತವೆ, ವ್ರದ್ಧಾವಸ್ಥೆಯಲ್ಲಿ ಹಲ್ಲುಗಳು ಬಹುಕಾಲದ ನಂತರ ಬೀಳುತ್ತವೆ
ಸ್ವಪ್ನ ದೋಷವನ್ನು ನಾಶಮಾಡಿ ಓಜಸ್ಸು - ತೇಜಸ್ಸನ್ನು ರಕ್ಷ್ಸಿಕೊಳ್ಳಿ
- ಒಣ ಕೊತಂಬರಿ ಕಾಳು ಹಾಗು ಕಲ್ಲು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೀಸಿಕೊಂಡು ಮುಂಜಾನೆ ತಂಪಾದ ನೀರಿನ ಜೊತೆ ೩-೩ ಗ್ರಾಮನಂತೆ ತಿನ್ನಿರಿ
- ಜೇಷ್ಟಮಧುವಿನ ಚೂರ್ಣ ೩ ಗ್ರಾಮ ಅನ್ನು ಜೇನುತುಪ್ಪದೊಡನೆ ನೆಕ್ಕಿರಿ
- ಕರಿ ಜಾಲಿ (ಗೊಬ್ಬಿ ಮರ) ದ ಎಲೆ ಹಾಗು ತೊಗಟೆಗಳಿಂದ ತಯಾರಿಸಿದ ಚೂರ್ಣವನ್ನು ೨ ಗ್ರಾಮ ಮುಂಜಾನೆ - ಸಾಯಂಕಾಲ ತೆಗೆದುಕೊಳ್ಳಿರಿ
- ನೆಲ್ಲಿಕಾಯಿಯ ಚೂರ್ಣ ಹಾಗು ಕಲ್ಲು ಸಕ್ಕರೆಯನ್ನು ಸಮಭಾಗದ ಮಿಶ್ರಣದಲ್ಲಿ ಶೇಕಡಾ ೨೦ ರಷ್ಟು ಅರಿಶಿಣವನ್ನು ಕೂಡಿಸಿಕೊಳ್ಳಿ, ೪ - ೫ ಗ್ರಾಮ ನಂತೆ ಪ್ರತಿದಿನ ನೀರಿನ ಜೊತೆ ತೆಗೆದುಕೊಳ್ಳುವದರಿಂದ ಸಹೋದರರ ಧಾತುಕ್ಷಯದಿಂದ ಹಾಗು ಸಹೋದರಿಯರ ಶ್ವೇತ ಪ್ರದರದ ತೊಂದರೆಗೆಳಲ್ಲಿ ಲಾಭವಾಗುತ್ತದೆ
ತುಳಸಿ ಹಾಗು ತುಳಸಿ ಮಾಲೆಯ ಮಹಿಮೆ
ತುಳಸಿ ಒಂದು ಉತ್ಕೃಷ್ಟ ರಸಾಯನವಾಗಿದೆ, ಇದು ಉಷ್ನ ಹಾಗು ತ್ರಿದೋಷ ಶಾಮಕವಾಗಿದೆ. ರಕ್ತವಿಕಾರ, ಜ್ವರ, ವಾಯು, ಕೆಮ್ಮು ಹಾಗು ಜಂತುನಾಶಕವಾಗಿದೆ ಅಲ್ಲದೆ ಹೃದಯಕ್ಕೆ ಹಿತಕಾರಿಯಾಗಿದೆ.
- ಬಿಳಿ ತುಳಸಿಯ ಸೇವನೆಯಿಂದ ತ್ವಚೆ, ಮಾಂಸ ಹಾಗು ಎಲುಬಿನ ರೋಗಗಳು ದೂರವಾಗುತ್ತವೆ
- ಕಪ್ಪು ತುಳಸಿಯ ಸೇವನೆಯಿಂದ ಬಿಳಿ ಕಲೆಗಳು ದೂರವಾಗುತ್ತವೆ
- ತುಳಸಿಯ ಬೇರು ಹಾಗು ಎಲೆಗಳು ಜ್ವರದಲ್ಲಿ ಉಪಯೋಗಕಾರಿಯಾಗಿವೆ
- ವೀರ್ಯದೋಷಗಳಲ್ಲಿ ಇದರ ಬೀಜ ಲಾಭಕಾರಿಯಾಗಿದೆ, ತುಳಸಿಯ ಚಹಾ ಕುಡಿಯುವದರಿಂದ ಆಲಸ್ಯ, ಸುಸ್ತು ಹಾಗು ವಾತ-ಪಿತ್ತದ ವಿಕಾರಗಳು ದೂರವಾಗುತ್ತವೆ, ಹಸಿವು ಹೆಚ್ಚಾಗುತ್ತದೆ
- ತುಳಸಿ ವನದಲ್ಲಿ ಮಾಡುವ ಪಿಂಡದಾನ ಮುಂತಾದವುಗಳಾದ ಪಿತೃಗಳಿಗೆ ಅಕ್ಷಯ ವಾಗುತ್ತದೆ. ಒಂದು ವೇಳೆ ತುಳಸಿಯ ಕಟ್ಟಿಗೆಯಿಂದ ತಯಾರಿಸಿದ ಮಾಲೆಗಳಿಂದ ಅಲಂಕ್ರತನಾಗಿ ಮನುಷ್ಯ ದೇವತೆಗಳ ಹಾಗು ಪಿತೃಗಳ ಪೂಜೆಯನ್ನು ಮಾಡಿದಲ್ಲಿ ಅದು ಕೋಟಿಯಷ್ಟು ಫಲವನ್ನು ನೀಡುವಂತಹದ್ದಾಗಿದೆ
- ತುಳಸಿ ಸೇವನೆಯಿಂದ ಶರೀರ ಸ್ವಸ್ಥ ಹಾಗು ಸುಂದರವಾದ ಮೈಕಟ್ಟನ್ನು ಹೊಂದುತ್ತದೆ, ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಲ್ಲಿ ಇದು ರಾಮಬಾಣ ಔಷಧಿಯೆಂದು ಸಿದ್ಧವಾಗಿದೆ
- ಕುತ್ತಿಗೆಯಲ್ಲಿ ತುಳಸಿಯ ಮಾಲೆಯನ್ನು ಧರಿಸುವದರಿಂದ ಜೀವನಶಕ್ತಿ ಹೆಚ್ಚಾಗುತ್ತದೆ. ಅವಶ್ಯಕವಾದ ಆಕ್ಯುಪ್ರೆಶರ್ ಬಿಂದುಗಳ ಮೇಲೆ ಒತ್ತಡ ಬೀಳುತ್ತದೆ ಇದರಿಂದಾಗಿ ಮಾನಸಿಕ ಒತ್ತಡಗಳಲ್ಲಿ ಲಾಭವಾಗುತ್ತದೆ, ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಾಗುತ್ತದೆ ಹಾಗು ಶರೀರದ ಸ್ವಾಸ್ಥ್ಯ ಸುಧಾರಿಸಿ ದೀರ್ಘಾಯು ಪ್ರಾಪ್ತಿಯಾಗುತ್ತದೆ. ಇದನ್ನು ಧರಿಸುವದರಿಂದ ಶರೀರದಲ್ಲಿ ವಿದ್ಯುತ ಶಕ್ತಿಯ ಪ್ರವಾಹವು ಬೆಳೆಯುತ್ತದೆ ಹಾಗು ಜೀವ ಕೋಶಗಳ ಮುಖಾಂತರ ಧಾರಣಶಕ್ತಿಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ಕುತ್ತಿಗೆಯಲ್ಲಿ ಹಾರವನ್ನು ಧರಿಸುವದರಿಂದ ವಿದ್ಯುತ ನ ಅಲೆಗಳು ಹೊರಬಿದ್ದು ರಕ್ತಸಂಚಾರ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುತ್ತವೆ. ಪ್ರಭಲ ವಿದ್ಯುತ ಶಕ್ತಿಯಿಂದಾಗಿ ಧರಿಸುವವರ ಮೇಲೆ ಚುಂಬಕೀಯ ಮಂಡಲವು ಚಾಲನೆಯಲ್ಲಿರುತ್ತದೆ, ತುಳಸಿ ಮಾಲೆ ಧರಿಸುವದರಿಂದ ಧ್ವನಿಯು ಸುಮಧರವಾಗುತ್ತದೆ, ಗಂಟಲಿನ ರೋಗಗಳಾಗುವದಿಲ್ಲ, ಮುಖವು ಬೆಳ್ಳಗೆ ಗುಲಾಬಿ ವರ್ಣದ್ದಾಗಿರುತ್ತದೆ. ಹೃದಯದ ಮೆಲೆ ನೇತಾಡುವ ತುಳಸಿ ಮಾಲೆಯು ಶ್ವಾಸ ಕೋಶ, ಹಾಗು ಹೃದಯ ರೋಗಗಳಿಂದ ರಕ್ಷಿಸುತ್ತದೆ. ಇದನ್ನು ಧರಿಸುವ ವರಲ್ಲಿ ಸಾತ್ವಿಕ ಸ್ವಭಾವದ ಸಂಚಾರವಾಗುತ್ತದೆ. ಯಾವ ಮನುಷ್ಯ ತುಳಸಿ ಕಟ್ಟಿಗೆಯಿಂದ ತಯಾರಾದ ಮಾಲೆಯನ್ನು ಭಗವಾನ ವಿಷ್ಣುವಿಗೆ ಅರ್ಪಿಸಿ ಪ್ರಸಾದ ರೂಪವಾಗಿ ಭಕ್ತಿಯಿಂದ ಧರಿಸುತ್ತಾನೆಯೋ ಅವನ ಅಪರಾಧಗಳು ನಷ್ಟವಾಗುತ್ತವೆ
- ಮಣಿಕಟ್ಟಿನಲ್ಲಿ ತುಳಸಿಯ ಮಾಲೆಯನ್ನು ಧರಿಸುವದರಿಂದ ನಾಡಿಮಿಡಿತ ತಪ್ಪುವದಿಲ್ಲ, ಕೈಗಳು ಮರಗಟ್ಟುವದಿಲ್ಲ ಹಾಗು ಭುಜಗಳಿಗೆ ಶಕ್ತಿ ಬರುತ್ತದೆ
- ತುಳಸಿಯ ಬೇರುಗಳನ್ನು ಸೊಂಟಕ್ಕೆ ಕಟ್ಟುವದರಿಂದ ಅದರಲ್ಲೂ ವಿಷೇಶವಾಗಿ ಗರ್ಭಿಣಿಯರಿಗೆ ವಿಷೇಶ ಲಾಭವಾಗುತ್ತದೆ. ಪ್ರಸವ ವೇದನೆ ಕಡಿಮೆಯಾಗುತ್ತದೆ ಹಾಗು ಸುಲಭವಾಗಿ ಆಗುತ್ತದೆ
- ಸೊಂಟಕ್ಕೆ ತುಳಸಿಯ ಉಡುದಾರವನ್ನು ಕಟ್ಟುವದರಿಂದ ಪಾರ್ಶ್ವವಾಯು ಸಂಭವಿಸುವದಿಲ್ಲ, ಸೊಂಟ, ಯಕೃತ್ತು, ಪ್ಲೀಹ, ಅಮಾಶಯ ಹಾಗು ಸೊಂಟದ ಭಾಗದಲ್ಲಿರುವ ಅಂಗಗಳ ವಿಕಾರಗಳುಂಟಾಗುವದಿಲ್ಲ
- ತುಳಸಿಯ ಮಾಲೆಯಿಂದ ಜಪವನ್ನು ಮಾಡುವದರಿಂದ ಬೆರಳುಗಳಲ್ಲಿರುವ ಅಕ್ಯುಪ್ರೆಶರ್ ಬಿಂದುಗಳಿಗೆ ಒತ್ತಡ ಬೀಳುವದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ
- ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ ತುಂಡಾಗಿರುವ ಎಲುಬುಗಳು ಮರು ಜೋಡಣೆಯಾಗುವಲ್ಲಿ ಸಹಾಯಕವಾಗುತ್ತದೆ
- ತುಳಸಿಯ ಹತ್ತಿರ ಓದುವದು, ಸಚ್ಚಿಂತನೆ ಮಾಡುವದರಿಂದ, ದೀಪವನ್ನು ಹಚ್ಚುವದರಿಂದ ಹಾಗು ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವದರಿಂದ ಐದು ಇಂದ್ರೀಯಗಳ ವಿಕಾರಗಳು ದೂರವಾಗುತ್ತವೆ
ಮಕ್ಕಳಿಗೆ ಪೌಷ್ಟಿಕ ತಿಂಡಿ
ರಾಗಿ ಅಥವಾ ನವಣೆಯ ಹಿಟ್ಟು ಹಾಗು ಎಳ್ಳನ್ನು ಚೆನ್ನಾಗು ಕಲೆಸಿಕೊಂಡು ನಾದಿಕೊಂಡು ರೊಟ್ಟಿಗಳನ್ನು ತಯಾರಿಸಿರಿ, ಅದರ ಜೊತೆಗೆ ಹಳೆಯ ಬೆಲ್ಲ ಹಾಗು ದೇಶಿ ತುಪ್ಪದೊಡನೆ ತಿನ್ನಲು ಕೊಡಿ. ಇದು ಶಕ್ತಿವರ್ಧಕ ಹಾಗು ಬಲವರ್ಧಕವಾಗಿದೆ, ಇದರಿಂದ ಬೇಗನೆ ಹಸಿವಾಗುವದಿಲ್ಲ. ಚಳಿಗಾಲದಲ್ಲಿ ಮಾತ್ರ ಈ ಪ್ರಯೋಗವನ್ನು ಮಾಡಿರಿ.
ಶಕ್ತಿ ಸ್ಪೂರ್ತಿ ಹೆಚ್ಚಿಸಲು
೪ ಚಮಚೆ ನೆಲ್ಲಿಕಾಯಿ (೩೦ ಗ್ರಾಮ) ಯನ್ನು ೧೦ ರಿಂದ ೧೫ ಗ್ರಾಮ ಜೇನು ತುಪ್ಪದೊಡನೆ ಕೂಡಿಸಿಕೊಂಡು ಮುಂಜಾನೆ ಭಗವಂತನನ್ನು ನೆನೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ, ಇದರಿಂದಾಗಿ ಸ್ಪೂರ್ತಿ, ಶಕ್ತಿ ಬರುತ್ತದೆ ಹಾಗು ಶರೀರದ ಅಂಗಗಳು ನಾವಿನ್ಯ ಹಾಗು ಅತ್ಯುತ್ತಮವಾಗುತ್ತವೆ
ಹಸಿವು ಹೆಚ್ಚಿಸಲು
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿನ್ನುವದರಿಂದ ಹಸಿವು ಹೆಚ್ಚಾಗುತ್ತದೆ ಹಾಗು ಸುಸ್ತು ದೂರವಾಗುತ್ತದೆ
ಬಕ್ಕ ತಲೆ
- ಎಮ್ಮೆಯ ಹಾಲಿನಲ್ಲಿ ತ್ರಿಫಳಾ ಚೂರ್ಣವನ್ನು ಕಲೆಸಿ ಲೇಪಿಸಿ ಕೊಳ್ಳುವದರಿಂದ ಬಿಳಿ ಕೂದಲುಗಳು ಕಪ್ಪಗಾಗುವವು ಹಾಗು ಬಕ್ಕ ತಲೆಯ ಮೇಲೆ ಕೂದಲುಗಳು ಬರಲು ಪ್ರಾರಂಭವಾಗುವುದು
- ತೆಂಗಿನ ಎಣ್ಣೆ ೨೫೦ ರಿಂದ ೫೦೦ ಗ್ರಾಮ ಹಾಗು ಕುದುರೆ ಲದ್ದಿಯನ್ನು ತಲೆಗೆ ತಗುಲುವಷ್ಟು ತೆಗೆದುಕೊಳ್ಳಿ, ಆಮೇಲೆ ಎಣ್ಣೆಯಲ್ಲಿ ಲದ್ದಿಯು ಒಣಗುವ ತನಕ ಕುದಿಸಿದ ಮೇಲೆ ಅದನ್ನು ಆರಿಸಿ ತಣ್ಣಗಾದ ಮೆಲೆ ತಲೆಗೆ ಹಚ್ಚಿಕೊಳ್ಳಿ, ಮುಂಜಾನೆ ತಿಂಡಿಯ ರೂಪದಲ್ಲಿ ಚ್ಯವನಪ್ರಾಶ ಅನ್ನು ಸೇವಿಸಿರಿ ಹಾಗು ನೆಲ್ಲಿಕಾಯಿ ರಸವನ್ನು ತಲೆಯ ಮೇಲೆ ಹಚ್ಚಿಕೊಂಡು ೧೫ ರಿಂದ ೨೦ ನಿಮಿಷಗಳ ನಂತರ ಸ್ನಾನ ಮಾಡಿರಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)