ಹಲ್ಲು

ಮನೆಯಲ್ಲಿಯೇ ಹಲ್ಲು ಪುಡಿ ತಯಾರಿಸಬಹುದಾದ ವಿಧಾನ:

  • ಶುಂಠಿ, ಕರಿ ಮೆಣಸು, ಪುದೀನ, ಅಳಲೆ, ತಾರೆಕಾಯಿ, ನೆಲ್ಲಿಕಾಯಿ, ದಾಲ್ಚಿನ್ನಿ (ಚಕ್ಕೆ), ಕಡುವಾಗಿರುವ ದಾಲ್ಚಿನ್ನಿ ಹಾಗು ಏಲಕ್ಕಿಯನ್ನು ಸಮಭಾಗದಲ್ಲಿ ತಯಾರಿಸಿಕೊಂಡ ಚೂರ್ಣದಲ್ಲಿ ಸ್ವಲ್ಪ ಸೈಂಧವ ಉಪ್ಪು ಹಾಗು ಎಳ್ಳೆಣ್ಣೆಯನ್ನು ಕೂಡಿಸಿ ’ದಂತಶೋಧಕ ಪೇಸ್ಟ’ ಅನ್ನು ತಯಾರಿಸಿ.

ಬಳಸುವ ವಿಧಾನ:

  • ಕೋಮಲವಾದ ಬೇವಿನ ಕಡ್ಡಿಯಿಂದ ಅಥವಾ ತೊರಬೆರಳಿನಿಂದ ವಸಡುಗಳಿಗೆ ಹಾನಿಯಾಗದಂತೆ ಹಲ್ಲುಗಳನ್ನು ತಿಕ್ಕಿರಿ, ಇದರಿಂದಾಗಿ ಬಾಯಿಯ ದುರ್ಗಂಧ, ಕಲ್ಮಷ ಹಾಗು ಕಫ ಹೊರ ಹೋಗುತ್ತದೆಯಲ್ಲದೆ ಮುಖದಲ್ಲಿ ನಿರ್ಮಲತೆ, ಆಹಾರದ ರುಚಿ ಮತ್ತು ಮನಸ್ಸು ಪ್ರಸನ್ನವಾಗಿರುತ್ತದೆ
  • ಹಲ್ಲುಗಳನ್ನು ತಿಕ್ಕಿದ ಮೇಲೆ ಕೋಮಲವಾದ ಬೇವಿನ ಕಡ್ಡಿಯನ್ನು ಎರಡು ತುಂಡುಗಳನ್ನಾಗಿಸಿ ಅದರಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿ
  • ದಿನದಲ್ಲಿ ಎರಡು ಬಾರಿ ಹಲ್ಲುಗಳನ್ನು ತಿಕ್ಕಿರಿ, ಊಟವಾದ ನಂತರ ಹಾಗು ಯಾವುದೆ ಖಾದ್ಯ-ಪೇಯವನ್ನು ತಿಂದ ನಂತರ ಹಲ್ಲು ಹಾಗು ನಾಲಿಗೆಯನ್ನು ಅವಶ್ಯವಾಗಿ ಸ್ವಚ್ಛಗೊಳಿಸಬೇಕು
ಗಂಡೂಷ ಧಾರಣ (ಬಾಯಿ ಮುಕ್ಕಳಿಸುವುದು)
    ದ್ರವ್ಯಗಳನ್ನು ಬಾಯಲ್ಲಿ ಕೆಲವು ಸಮಯದ ತನಕ ಇಟ್ಟುಕೊಂಡು ನಂತರ ಉಗುಳುವುದನ್ನು ಗಂಡೂಷ ಧಾರಣ ಮಾಡುವುದು ಎನ್ನುತ್ತಾರೆ. ತ್ರಿಫಳಾ ಚೂರ್ಣವನ್ನು ರಾತ್ರಿಯಲ್ಲಿ ನೆನೆಯಿಡಬೇಕು, ಮುಂಜಾನೆ ಅದನ್ನು ಸೋಸಿ ಅದರಿಂದ ಬಾಯಿ ಮುಕ್ಕಳಿಸಬೇಕು. ಹಲ್ಲು ತಿಕ್ಕಿದ ನಂತರ ಗಂಡೂಷ ಧಾರಣೆ ಮಾಡುವದರಿಂದ ಅರುಚಿ, ಬಾಯಿಯ ದುರ್ಘಂಧ, ವಸಡುಗಳ ತೊಂದರೆ ದೂರವಾಗುತ್ತದೆ. ಬಾಯಿ ಹಗುರಾಗುತ್ತದೆ. ಉಗುರು ಬೆಚ್ಚಗಿನ ಎಳ್ಳೆಣ್ಣೆಯಿಂದ ಗಂಡೂಷ ಧಾರಣೆ ಮಾಡುವದರಿಂದ ಸ್ವರ ಕೋಮಲವಾಗುತ್ತದೆ, ಹಲ್ಲು ಹಾಗು ವಸಡುಗಳು ವ್ರದ್ಧಾವಸ್ಥೆಯಲ್ಲೂ ಗಟ್ಟಿಯಾಗಿರುತ್ತವೆ, ವ್ರದ್ಧಾವಸ್ಥೆಯಲ್ಲಿ ಹಲ್ಲುಗಳು ಬಹುಕಾಲದ ನಂತರ ಬೀಳುತ್ತವೆ

    ಕಾಮೆಂಟ್‌ಗಳಿಲ್ಲ: