ಮಹತ್ವವಾದ ಒಂಭತ್ತು ಮಾತುಗಳು

ಈ ಕೆಳಗಿರುವ ವಿಷಯಗಳನ್ನು ಗೋಪ್ಯವಾಗಿಡಬೇಕು

  • ನಮ್ಮ ವಯಸ್ಸನ್ನು ಯಾರಿಗೂ ಹೇಳಬಾರದು
  • ನಮ್ಮ ಹಣವನ್ನು ರಹಸ್ಯವಾಗಿಡಬೇಕು
  • ಮನೆಯ ರಹಸ್ಯಗಳನ್ನು ಗೋಪ್ಯವಾಗಿಡಬೇಕು
  • ಗುರುಮಂತ್ರವನ್ನು ಗೋಪ್ಯವಾಗಿಡಬೇಕು
  • ಪತಿ-ಪತ್ನಿಯರ ಸಂಸಾರ ವ್ಯವಹಾರಗಳನ್ನು ಗೋಪ್ಯವಾಗಿಡಬೇಕು
  • ಯಾವ ಔಷಧಿಯನ್ನು ತೆಗೆದುಕೊಳ್ಳುತಿರುವಿರಿ ಎನ್ನುವದು ಗೋಪ್ಯವಾಗಿಡಬೇಕು
  • ಸಾಧನೆ - ಭಜನೆಗಳನ್ನು ಗೋಪ್ಯವಾಗಿಡಬೇಕು
  • ದಾನ ಮಾಡಿದ್ದನ್ನು ಗೋಪ್ಯವಾಗಿಡಬೇಕು
  • ನಮ್ಮ ಅಪಮಾನವನ್ನು ಗೋಪ್ಯವಾಗಿಡಬೇಕು
ಈ ಕೆಳಗಿರುವ ವಿಷಯಗಳನ್ನು ಎಲ್ಲರ ಮುಂದೆ ಮುಚ್ಚು-ಮರೆಯಿಲ್ಲದೆ ಮುಕ್ತವಾಗಿಡಬೇಕು
  • ಸಾಲ ತೆಗೆದುಕೊಂಡಿರುವ ಬಗ್ಗೆ " ನಾನು ಈ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುತ್ತೇನೆ" ಇತ್ಯಾದಿ
  • ಸಾಲ ತೀರಿಸುವದರ ಬಗ್ಗೆ " ನಾನು ಇಂತಹ ವ್ಯಕ್ತಿಯ ಇಷ್ಟು ಸಾಲವನ್ನು ತೀರಿಸಬೇಕು" ಇದರಿಂದಾಗಿ ವಿಶ್ವಾಸ ಹೆಚ್ಚಾಗುತ್ತದೆ
  • ದಾನ ಮಾಡಬೇಕಾಗಿರುವ ವಸ್ತುವನ್ನು ಎಲ್ಲರಿಗು ಹೇಳಬೇಕು, ಇಲ್ಲವಾದರೆ ಅದನ್ನು ಕಳ್ಳತನ ಎನ್ನುವರು
  • ಮಾರಾಟ ಮಾಡುವ ವಸ್ತು - " ನನಗೆ ಈ ವಸ್ತುವನ್ನು ಇಷ್ಟು ಬೆಲೆಗೆ ಮಾರಬೇಕು", ಯಾರು ಬಲ್ಲರು ಇದಕ್ಕಿಂತ ಹೆಚ್ಚಾಗಿ ಬೆಲೆ ಕೊಡುವವರು ಸಿಗಬಹುದು
  • ಕನ್ಯದಾನ - " ನನ್ನ ಮಗಳನ್ನು ಇಂಥಹ ವ್ಯಕ್ತಿಗೆ ಕೊಡಬೇಕೆಂದಿದ್ದೇನೆ" ಯಾರು ಬಲ್ಲರು ಕನ್ಯಯಲ್ಲಿ ಅಡಗಿರುವ ಅಮಂಗಳ ಪ್ರಕಟವಾಗಲೂಬಹುದು
  • ಅಧ್ಯಯನ - "ನಾನು ಇಷ್ಟು ಓದಿದ್ದೇನೆ" ಇದರಿಂದಾಗಿ ಜನರ ಮನಸ್ಸಿನಲ್ಲಿ ವಿಶ್ವಾಸ ಹಾಗು ಸರಳತೆ ಉಳಿಯುತ್ತದೆ
  • ಏಕಾಂತದಲ್ಲಿ ಮಾಡುವ ಜಪ
  • ಅನಿಂದನೀಯ ಶುಭ ಕರ್ಮಗಳು
ಈ ಕೆಳಗೆ ಹೇಳಿರುವ ವ್ಯಕ್ತಿಗಳ ವಿರೋಧವನ್ನು ಕಟ್ಟಿಕೊಳ್ಳಬೇಡಿ
  • ಅಡುಗೆ ಮಾಡುವವ
  • ಶಸ್ತ್ರಧಾರಿಯೊಡನೆ ಒಬ್ಬಂಟಿಗನಾಗಿ ವಿರೋಧಿಸಬೇಡಿ, " ಜ್ನ್ಯಾನಿಗಳ ಗುರುಗಳಾಗಿರುವ ನಾವು, ಮೂರ್ಖರಿಗೆ ದಾಸರಾಗಿರುವೆವು, ಅವನು ಬಡಿಗೆ ತೋರಿಸಿದರೆ ನಾವು ಕೈ ಜೋಡಿಸುವೆವು"
  • ನಿಮ್ಮ ಜೀವನದ ಗುಪ್ತ ರಹಸ್ಯಗಳನ್ನು ಬಲ್ಲವರು
  • ನಿಮ್ಮ ಅಧಿಕಾರಿಗಳು/ ಮಾಲೀಕರು
  • ಮೂರ್ಖ ವ್ಯಕ್ತಿ
  • ಅಧಿಕಾರವುಳ್ಲವನು
  • ಹಣವಂತ
  • ವೈದ್ಯ
  • ಕವಿ/ ಹಾಡುಗಾರ

ಕಾಮೆಂಟ್‌ಗಳಿಲ್ಲ: