ದೀಪಾವಳಿ

  • ದೀಪಾವಳಿಯಂದು ಮನೆಯ ಮುಂಬಾಗಿಲ ಮೇಲೆ ಅಕ್ಕಿ ಹಿಟ್ಟು ಹಾಗು ಅರಿಶಿಣದ ಮಿಶ್ರಣದಿಂದ ಸ್ವಸ್ತಿಕ ಅಥವಾ ಓಂ ಬರೆಯಿರಿ, ಇದರಿಂದಾಗಿ ಗ್ರಹ ದೋಷ ದೂರವಾಗಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ
  • ದೀಪಾವಳಿಯ ಹಬ್ಬದಲ್ಲಿ ಮನೆಯ ಹೊರಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿಡಿ, ಇದರಿಂದಾಗಿ ಮನೆಗೆ ಲಕ್ಷ್ಮಿ ಕೃಪೆ ಹೆಚ್ಚಾಗುತ್ತದೆ
  • ಸ್ವಲ್ಪ ಪಾಯಸವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ತೆಂಗಿನಕಾಯಿಯ ಜೊತೆ ಮನೆಯ ಸುತ್ತ-ಮುತ್ತ ಹಾಗು ಒಳಗಡೆ ತಿರುಗಾಡುತ್ತ ಮನಸ್ಸಿನಲ್ಲಿ ಮನಸ್ಸಿನಲ್ಲಿ ಲಕ್ಷ್ಮಿ-ನಾರಾಯಣರ ಜಪವನ್ನು ಮಾಡಿರಿ, ಆನಂತರ ಪಾಯಸವನ್ನು ಯಾರ ಕಾಲಿಗು ತಾಗದಂತೆ ಇಡಿ ಹಾಗು ಆಕಳು, ಕಾಗೆ ಇತ್ಯಾದಿ ಪಶು-ಪ್ರಾಣಿಗಳು ತಿನ್ನುವಂತೆ ಇಡಿ. ತೆಂಗಿನಕಾಯಿಯನ್ನು ಮುಂಬಾಗಿಲಿನ ಹೊಸ್ತಿಲ ಮೇಲೆ ಒಡೆದು ಪ್ರಸಾದ ದಂತೆ ಹಂಚಿರಿ. ಇದರಿಂದಾಗಿ ಮನೆಯಲ್ಲಿ ಆನಂದ ಹಾಗು ಸುಖ-ಶಾಂತಿ ನೆಲೆಸುತ್ತದೆ
  • ದೀಪಾವಳಿಯಂದು ಮನೆಯ ಮುಖ್ಯ ಬಾಗಿಲಿಗೆ ಬೇವು ಹಾಗು ಅಶೋಕ ಗಿಡದ ಎಲೆಗಳ ತೋರಣವನ್ನು ಕಟ್ಟಿರಿ, ಇದರ ಕೆಳಗಿನಿಂದ ಹಾಯ್ದು ಹೋಗುವವರ ರೋಗ ಪ್ರತಿಕಾರಕ ಶಕ್ತಿ ಬೆಳೆಯುವುದು
  • ಒಂದು ವೇಳೆ ದೀಪಾವಳಿಯ ರಾತ್ರಿಯಂದು ಮನೆಯಲ್ಲಿರುವ ಎಲ್ಲ ಜನರು ಕೂಡಿ ಸುಡುತ್ತಿರುವ ಆಕಳಿನ ಬೆರಣಿಯ ಮೇಲೆ ೫-೫ ಆಹುತಿಗಳನ್ನು (ತುಪ್ಪ, ಬೆಲ್ಲ, ಶ್ರೀಗಂಧದ ಪುಡಿ, ದೇಶಿ ಕರ್ಪೂರ, ಗುಗ್ಗುಳ, ಅಕ್ಕಿ, ಜವೆ ಗೋದಿ ಹಾಗು ಎಳ್ಳು ) ಕೊಟ್ಟರೆ ಮನೆಯಲ್ಲಿ ಐಶ್ವರ್ಯ ಹಾಗು ಮನೆಯಲ್ಲಿನ ಕಲಹಗಳು ದೂರವಾಗಿ ಮಾತುಕತೆಗಳು ಪ್ರಾರಂಭವಾಗುವವು. ೫-೫ ಆಹುತಿಗಳನ್ನು ಈ ಮಂತ್ರಗಳನ್ನು ಉಚ್ಛರಿಸುತ್ತ ಕೊಡಿ: ಸ್ಥಾನ ದೇವತಾಭ್ಯೊ ನಮಃ, ಗ್ರಾಮ ದೇವಾತಾಭ್ಯೊ ನಮಃ, ಕುಲ ದೇವತಾಭ್ಯೊ ನಮಃ. ಕೊನೆಯಲ್ಲಿ ೨ ರಿಂದ ೫ ಆಹುತಿಗಳನ್ನು ಲಕ್ಷ್ಮಿ ದೇವಿಯ ಹೆಸರಿನಲ್ಲಿ ವಿಷೇಶವಾಗಿ ಕೊಡಿರಿ
  • ನರಕ ಚತುರ್ದಶಿಯಂದು ಸಾಸಿವೆ ಎಣ್ಣೆ / ತುಪ್ಪದ ದೀಪದಿಂದ ಕಾಡಿಗೆಯನ್ನು ತಯಾರಿಸಿ ಹಚ್ಚಿಕೊಂಡರೆ ದ್ರಷ್ಟಿ ತಾಗುವದಿಲ್ಲ ಹಾಗು ನೇತ್ರ ಜ್ಯೋತಿಯು ಬೆಳೆಯುತ್ತದೆ ಅದಲ್ಲದೆ ಭೂತ-ಪ್ರೇತಗಳ ಬಾಧೆ ನಾಶವಾಗುತ್ತದೆ
  • ದೀಪಾವಳಿಯ ಹಬ್ಬದಲ್ಲಿ ನಾಲ್ಕು ಮುಖಗಳ ಪಣತಿಯನ್ನು ನಾಲ್ಕು ರಸ್ತೆಗಳು ಕೂಡುವ ಸ್ಥಳದಲ್ಲಿ ಹಚ್ಚುವದರಿಂದ ನಾಲ್ಕು ದಿಕ್ಕಿನಿಂದ ಮಂಗಳವನ್ನುಂಟು ಮಾಡುತ್ತದೆ
  • ಯಾವುದೇ ಕಾರಣಕ್ಕೂ ಕಾರ್ತಿಕ ಮಾಸ (ತಿಂಗಳು) ದಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳಬಾರದು, ಆದರೆ ನರಕ ಚತುರ್ದಶಿಯಂದು ಸೂರ್ಯೋದಕ್ಕಿಂತ ಮುಂಚೆ ಎದ್ದು ಎಣ್ಣೆಯ ಮಾಲೀಶ (ತೈಲಾಭ್ಯಾಂಗ) ಮಾಡಿಕೊಂಡು ಸ್ನಾನ ಮಾಡುವ ವಿಧಾನವಿದೆ. ಸನತ್ಕುಮಾರ ಸಂಹಿತೆ ಹಾಗು ಧರ್ಮಸಿಂಧು ಗ್ರಂಥ ಅನುಸಾರ ಇದರಿಂದಾಗಿ ನಾರಕೀಯ ಯಾತನೆಗಳಿಂದ ರಕ್ಷಣೆಯಾಗುತ್ತದೆ, ಯಾರು ಈ ದಿನದಂದು ಸೂರ್ಯೋದಯ ನಂತರ ಸ್ನಾನ ಮಾಡುತ್ತಾರೆಯೋ ಅವರ ಶುಭ ಕರ್ಮಗಳು ನಾಶವಾಗುತ್ತವೆ
  • ದೀಪಾವಳಿಯ ರಾತ್ರಿಯಂದು ಮುಖ್ಯ ಬಾಗಿಲಿನ ಎರಡು ಕಡೆಗಳಲ್ಲಿ ಗೋದಿಯ ಗುಡ್ಡೆಯ ಮೇಲೆ ಒಂದೊಂದಾಗಿ ಹಣತೆಗಳನ್ನು ಹಚ್ಚಿಡಿ ಹಾಗು ಅವುಗಳು ರಾತ್ರಿಯಿಡಿ ಉರಿಯುತ್ತಿರುವ ಹಾಗೆ ನೋಡಿಕೊಳ್ಳಿ, ನಿಮ್ಮ ಮನೆ ಸುಖ-ಸಮ್ರದ್ಧಿಗಳಿಂದ ತುಂಬಿ ತುಳುಕುವುದು.
  • ದೀಪಾವಳಿಯ ರಾತ್ರಿಯಂದು ಚಿಕ್ಕದ್ದಾದ ಬೆಳ್ಳಿಯ ಬಟ್ಟಲಿನಲ್ಲಿ ಕರ್ಪೂರವನ್ನು ಉರಿಸುವದರಿಂದ ದೈಹಿಕ, ದೈವಿಕ ಹಾಗು ಭೌತಿಕ ಪೀಡೆಗಳು/ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ
  • ದೀಪಾವಳಿಯಂದು ಸ್ಫಟಿಕ ದ ಮಾಲೆಯಿಂದ ಈ ಕೆಳಗಿನ ಮಂತ್ರಗಳನ್ನು ಜಪಿಸುವದರಿಂದ ಲಕ್ಶ್ಮಿ ಪ್ರಾಪ್ತಿಯಾಗುತ್ತದೆ
         ॐ ಮಹಾಲಕ್ಷ್ಮಯೇ ನಮಃ
         ॐ ವಿಷ್ಣು ಪ್ರಿಯಾಯೇ ನಮಃ
         ॐ ಶ್ರೀ ನಮಃ
  • ದೀಪಾವಳಿಯಂದು ಗಣಪತಿಯನ್ನು ಲಕ್ಶ್ಮಿಯ ಬಲಗಡೆ ಇಟ್ಟು ಪೂಜಿಸುವದರಿಂದ ಕಷ್ಟಗಳು ದೂರವಾಗುತ್ತವೆ


        ಕಾಮೆಂಟ್‌ಗಳಿಲ್ಲ: