ಮೆದುಳು ಹಾಗು ಮಾನಸಿಕ ರೋಗಗಳಲ್ಲಿ

  • ಜ್ಯೋತಿಷ್ಮತಿ ಎಣ್ಣೆಯ ೨-೨ ಹನಿಗಳನ್ನು ಒಂದು ಪುರಿಯಲ್ಲಿ ಹಾಕಿಕೊಂಡು ಮುಂಜಾನೆ ಸಾಯಂಕಾಲ ತಿನ್ನುವದರಿಂದ ಮಸ್ತಿಷ್ಕ ಹಾಗು ಮಾನಸಿಕ ರೋಗಗಳಲ್ಲಿ ಲಾಭವಾಗುತ್ತದೆ
  • ಆರೋಗ್ಯದಿಂದಿರುವಾಗ ೮-೧೦ ತುಳಸಿ ಎಲೆಗಳು, ಒಂದು ಕರಿಮೆಣಸು ಹಾಗು ಗುಲಾಬಿ ಹೂವಿನ ಒಂದಷ್ಟು ಪಕಳೆಗಳನ್ನು ಸಣ್ಣಗೆ ರುಬ್ಬಿಕೊಂಡು ನೀರಿನ ಜೊತೆ ಪ್ರತಿದಿನ ಮುಂಜಾನೆ ಕುಡಿಯುವದರಿಂದ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿ ಒಂದರಿಂದ ಮೂರು ಬದಾಮಗಳನ್ನು ಕೂಡಿಸಿಕೊಂಡು ಥಂಡಾಯಿ (ಶರಬತ್ತು) ಮಾಡಬಹುದು, ಇದಕ್ಕಾಗಿ ಹಿಂದಿನ ರಾತ್ರಿಯಂದು ಬದಾಮ ಅನ್ನು ನೀರಿನಲ್ಲಿ ನೆನೆಯಿಡಬೇಕು, ಮುಂಜಾನೆ ಬದಾಮನ ಸಿಪ್ಪೆಯನ್ನು ತೆಗೆದು ರುಬ್ಬಿಕೊಳ್ಳಿ. ಇದು ಮೆದುಳಿಗೆ ಶೀತಲತೆಯನ್ನು ಹಾಗು ಸ್ಫೂರ್ತಿಯನ್ನು ನೀಡುತ್ತದೆ
  • ಪ್ರತಿದಿನ ಮುಂಜಾನೆ ನೆಲ್ಲಿಕಾಯಿಯ ಮುರಬ್ಬ (ಗುಳಂಬು) ತಿನ್ನುವದರಿಂದ ಸ್ಮರಣ ಶಕ್ತಿಯ ವೃದ್ಧಿಯಾಗುತ್ತದೆ, ಅಥವಾ ಚ್ಯವನಪ್ರಾಶ ತಿನ್ನುವದರಿಂದ ಇದರ ಜೊತೆಗೆ ಅನೇಕ ಲಾಭಗಳಾಗುತ್ತವೆ
  • ಬಿಸಿಯಾದ ಹಾಲಿನಲ್ಲಿ ಒಂದರಿಂದ ಮೂರು ಬದಾಮನ ಪುಡಿ ಹಾಗು ಕೇಸರದ ಎರಡು-ಮೂರು ಎಳೆಗಳನ್ನು ಹಾಕಿ ಕುಡಿಯುವದರಿಂದ ಸ್ಮರಣ ಶಕ್ತಿ ತೀವ್ರವಾಗುತ್ತದೆ
  • ನೆತ್ತಿಯ ಮೇಲೆ ದೇಶಿ ಆಕಳಿನ ತುಪ್ಪದಿಂದ ಮಾಲಿಶ ಮಾಡುವದರಿಂದ ಸ್ಮರಣ ಶಕ್ತಿ ಉಳಿಯುತ್ತದೆ
  • ಮೂಲಭಂಧ, ಉಡ್ಯಿಯಾಣ ಬಂಧ. ಜಾಲಂಧರ ಬಂಧ ( ಗಂಟಲಿನ ಮೇಲೆ ಒತ್ತಡವನ್ನು ಹಾಕಿ ಗದ್ದವನ್ನು ಎದೆಯ ಕಡೆಗೆ  ಎಳೆದುಕೊಂಡು ಕುಳಿತುಕೊಳ್ಳುವುದು) ಮಾಡುವದರಿಂದಲೂ ಬುದ್ಧಿ ವಿಕಸಿತವಾಗುತ್ತದೆ

ಕಾಮೆಂಟ್‌ಗಳಿಲ್ಲ: