ಮೊಸರು : ಬಲ, ವೀರ್ಯ ಹಾಗು ಪುಷ್ಟಿವರ್ಧಕ

ಶೀತ ಋತುವಿನಲ್ಲಿ ಮೊಸರಿನ ಸೇವನೆ ತುಂಬಾ ಲಾಭದಾಯಕವಾಗಿದೆ, ಮೊಸರಿನಲ್ಲಿ ಹಾಲಿಗಿಂತಲೂ ಒಂದುವರೆ ಪಟ್ಟು ಅಧಿಕ ಕ್ಯಾಲ್ಶಿಯಂನ ಆಂಶ ಇದೆ. ಹೃದಯಕ್ಕೆ ಅತಿ ವೇಗವಾಗಿ ಶಕ್ತಿಯನ್ನು ಕೊಡುವದರಲ್ಲಿ ಮೊಸರು ಒಂದು, ತಾಜಾ ಮೊಸರಿನಲ್ಲಿ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿ ಕಡೆಯಿರಿ (ಇದರಿಂದ ಮೊಸರಿನಲ್ಲಿರುವ ದೋಷಗಳು ನಾಶವಾಗುತ್ತವೆ) ಇದನ್ನು ಮಧ್ಯಾಹ್ನ ಊಟದ ಜೊತೆ ಬಳಸಿರಿ, ಇದರಿಂದಾಗಿ ಶರೀರ ಪುಷ್ಟವಾಗುವುದು.
ಎಚ್ಚರಿಕೆ : ಪಿತ್ತ, ಅಜೀರ್ಣ, ಕಫ, ನೆಗಡಿ - ಜ್ವರ, ರಕ್ತಪಿತ್ತ, ಮೂತ್ರ ಪಿಂಡಗಳ ಕಾಯಿಲೆ ಹಾಗು ಹೃದಯ ರೋಗಗಳಿದ್ದವರು ಮೊಸರನ್ನು ಸೇವಿಸಬಾರದು

ಕಾಮೆಂಟ್‌ಗಳಿಲ್ಲ: