ಪಾಲಕ ಸೊಪ್ಪು

  • ಪಾಲಕ ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳು ಸಾಕಷ್ಟಿವೆ, ಇದರಲ್ಲಿ ಕಬ್ಬಿಣ ಹಾಗು ತಾಮ್ರದ ಅಂಶಗಳಿರುವದರಿಂದ ಪಾಂಡುರೋಗದಲ್ಲಿ ಪಥ್ಯವೆಂದು ಬಳಸಬಹುದು, ಇದು ರಕ್ತವನ್ನು ಶುದ್ಧಗೊಳಿಸುತ್ತದೆ ಹಾಗು ಎಲುಬುಗಳನ್ನು ಗಟ್ಟಿಯಾಗುಸುತ್ತದೆ
  • ಪಚನ ಕ್ರಿಯೆಗೆ ಇದು ತುಂಬಾ ಉಪಯುಕ್ತವಾಗಿದೆ, ಇದನ್ನು ನಿಯಮಿತವಾಗಿ ಸೇವಿಸುವದರಿಂದ ಹೊಟ್ಟೆಯ ರೋಗಗಳು ಹಾಗು ಮಲ ಬದ್ಧತೆಯಿಂದ ಮುಕ್ತಿ ಸಿಗುವದಲ್ಲದೆ ಹಸಿವು ಹೆಚ್ಚಾಗುತ್ತದೆ
  • ಗರ್ಭವತಿಯು ಇದನ್ನು ನಿಯಮಿತವಾಗಿ ಸೇವಿಸುವದರಿಂದ ಪ್ರಸವದ ಸಮಯದಲ್ಲಿ ಆಗುವ ತೊಂದರೆಗಳಿಂದ ರಕ್ಷಣೆಯಾಗುತ್ತದೆ
  • ಇದು ವಾಯುವನ್ನುಂಟುಮಾಡುತ್ತದೆ, ಶೀತಲವಾಗಿರುವದರಿಂದ ಮಧುಮೇಹದಲ್ಲಿ ಅತ್ಯಂತ ಗುಣಕಾರಿಯಾಗಿದೆ
  • ಇದರ ಬೀಜಗಳಿಂದ ಯಕ್ರತ್ತಿನ ರೋಗ, ಕಾಮಾಲೆ ಹಾಗು ಪಿತ್ತ ಪ್ರಕೋಪಗಳನ್ನು ನಾಶ ಮಾಡುತ್ತದೆ
  • ಕಫ ಹಾಗು ಶ್ವಾಸಕ್ಕೆ ಸಂಭಧಿಸಿದ ರೋಗಗಳಲ್ಲಿ ಕೂಡ ಇದು ಹಿತಕಾರಿಯಾಗಿದೆ
  • ಕೆಮ್ಮು ಹಾಗು ಗಂಟಲಿನ ಉರಿತ ಹಾಗು ಶ್ವಾಸ ಕೋಶದಲ್ಲಿ ಬಾವು ಉಂಟಾಗಿರುವಾಗ ಪಾಲಕ ರಸದಿಂದ ಗಂಟಲನ್ನು ತೊಳೆಯುವದರಿಂದ ಶಮನವಾಗುತ್ತದೆ
  • ಕೂದಲಗಳು ತುಂಬಾ ಉದುರುವುದು ಹಾಗು ಹೇನುಗಳಾಗಿದ್ದಲ್ಲಿ, ಕುದಿಯುತ್ತಿರುವ ಪಾಲಕ ರಸದಲ್ಲಿ ಸಮಪ್ರಮಾಣದಲ್ಲಿ ನಿಂಬೆ ರಸವನ್ನು ಸೇರಿಸಿ ತಲೆಯನ್ನು ತೊಳೆಯುವದರಿಂದ ಈ ಸಮಸ್ಯೆ ದೂರವಾಗುತ್ತದೆ
  • ಹಲ್ಲುಗಳಲ್ಲಿ ಪಯೋರಿಯಾ ರೋಗವಾದಾಗ ಕೆಲವು ದಿನಗಳವರೆಗೆ ಪ್ರಾತಃಕಾಲದಲ್ಲಿ ಅರ್ಧ ಗ್ಲಾಸನಷ್ಟು ಪಾಲಕ ರಸವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿರಿ ಇದಲ್ಲದೆ ಪಾಲಕ ಸೊಪ್ಪನ್ನು ಚೆನ್ನಾಗಿ ಅಗೆದು ತಿನ್ನಿರಿ. ಪಾಲಕ ರಸದಲ್ಲಿ ಗಜ್ಜರಿಯ ರಸವನ್ನು ಕೂಡಿಸಿ ಕುಡಿಯುವದರಿಂದ ವಸಡುಗಳಿಂದ ರಕ್ತ ಸೋರುವಿಕೆಯು ನಿಲ್ಲುತ್ತದೆ
  • ಪಾಲಕದ ಎಲೆಯ ಜೊತೆಗೆ ಬೇವಿನ ಎಲೆಯನ್ನು ಅರೆದು ತಯಾರಿಸಿದ ಲೇಪದಿಂದ ಕೀವು ತುಂಬಿದ ಗುಳ್ಳೆಗಳ ಮೇಲೆ ಹಚ್ಚುವದರಿಂದ ಕೆಟ್ಟಿರುವ ರಕ್ತ ಹೊರ ಬರುತ್ತದೆ ಹಾಗು ಗುಳ್ಳೆ ಮಾಯವಾಗುತ್ತದೆ
  • ಸುಟ್ಟಿರುವ ಅಂಗಗಳ ಮೇಲೆ ಅರೆದಿರುವ ಪಾಲಕದ ಎಲೆಗಳ ಲೇಪವನ್ನು ತತ್ಕಾಲ ಮಾಡುವದರಿಂದ ಉರಿತ ಶಮನವಾಗುವುದು ಹಾಗು ಗುಳ್ಳೆಗಳುಂಟಾಗುವದಿಲ್ಲ
  • ಯಾವುದೇ ಔಷಧಿಯ ಪರೋಕ್ಷ ಪರಿಣಾಮ (Side effect) ವಾದಾಗ ಅಥವಾ ವಿಷಕಾರಿ ವಸ್ತುವನ್ನು ತಿಂದಾಗ ನೀರಿನಲ್ಲಿ ಪಾಲಕ ಸೊಪ್ಪನ್ನು ಕುದಿಸಿ ಅದರಲ್ಲಿ ಸ್ವಲ್ಪ ಹಸಿ ಶುಂಠಿಯ ರಸವನ್ನು ಸೇರಿಸಿ ಪ್ರಭಾವಕ್ಕೊಳಗಾದ ವ್ಯಕ್ತಿಗೆ ಕುಡಿಸುವದರಿಂದ ಆ ಕ್ಷಣದಲ್ಲಿ ನೆಮ್ಮದಿ ದೊರೆಯುತ್ತದೆ
  • ರಕ್ತಾಲ್ಪತೆಯ ರೋಗದಲ್ಲಿ ಪಾಲಕನ ನಿಯಮಿತ ಸೇವನೆ ಹಾಗು ಅರ್ಧ ಗ್ಲಾಸ ಪಾಲಕ ರಸದ ಜೊತೆಗೆ ೨ ಚಮಚ ಜೇನು ತುಪ್ಪವನ್ನು ಸೇರಿಸಿಕೊಂಡು ೫೦ ದಿನಗಳವರೆಗೆ ಕುಡಿಯಿರಿ, ಇದರಿಂದ ತುಂಬಾ ಲಾಭವಾಗುವುದು
  • ಪಾಲಕ ನ ನಿಯಮಿತ ಸೇವನೆಯಿಂದ ಸಮಸ್ತ ವಿಕಾರಗಳು ದೂರವಾಗಿ ಮುಖವು ಕೆಂಪಾಗುವುದು , ಶರೀರದಲ್ಲಿ ಸ್ಪೂರ್ತಿ, ಉತ್ಸಾಹ, ಶಕ್ತಿಯ ಸಂಚಾರ ಹಾಗು ರಕ್ತದ ಪ್ರಸರಣೆ ವೇಗವಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವದರಿಂದ ಮುಖದ ಕಾಂತಿ ಬೆಳೆಯುತ್ತದೆ ಹಾಗು ನೇತ್ರ ಜ್ಯೋತಿ ಹೆಚ್ಚಾಗುತ್ತದೆ
  • ಪಾಲಕವು ಕಾಮಾಲೆ, ಉನ್ಮಾದ, ಹಿಸ್ಟಿರಿಯಾ, ನೀರಡಿಕೆ, ಉರಿತ, ಪಿತ್ತಜ್ವರದಲ್ಲಿ ಲಾಭವನ್ನುಂಟು ಮಾಡುತ್ತದೆ.
ವಿಷೇಶ: ಪಾಲಕ ಸೊಪ್ಪು ವಾಯುವನ್ನುಂಟು ಮಾಡುವದರಿಂದ ಮಳೆಗಾಲದಲ್ಲಿ ಇದನ್ನು ಸೇವಿಸ ಬೇಡಿ, ಇದರ ಎಲೆಗಳಲ್ಲಿ ಸೂಕ್ಷ್ಮ ಕೀಟಾಣುಗಳಿರುತ್ತವೆ ಆದ್ದರಿಂದ ಬಿಸಿ ನೀರಿನಲ್ಲಿ ತೊಳೆದು ಬಳಸಿರಿ

ಕಾಮೆಂಟ್‌ಗಳಿಲ್ಲ: