ಆಲದ ಮರ

  • ಮೂಳವ್ಯಾಧಿ, ವೀರ್ಯ ತಿಳುವಾಗುವುದು, ಶೀಘ್ರ ಪತನ, ಸ್ವಪ್ನ ದೂಷ ಇತ್ಯಾದಿ ರೋಗಗಳಲ್ಲಿ ಆಲದ ಎಲೆಯ ಹಾಲು ತುಂಬ ಪರಿಣಾಮಕಾರಿಯಾಗಿದೆ. ಮುಂಜಾನೆ ವಾಯು ಸೇವನೆಗೆ ಹೋಗುವ ಸಮಯದಲ್ಲಿ ೨ - ೩ ಆಲುಗಡ್ಡೆಯಿಂದ ತಯಾರಿಸಿದ ಪುರಿಗಳನ್ನು ತೆಗೆದುಕೊಳ್ಳಿರಿ, ಆಲದ ಗಿಡದ ಎಳೆಯ ಎಲೆಗಳಿಂದ ೪-೫ ಹನಿಗಳಷ್ಟು ಹಾಲನ್ನು ತೆಗೆದು ಅದನ್ನು ಆಲುಗಡ್ಡೆಯಿಂದ ತಯಾರಿಸಲಾದ ಪುರಿಯಲ್ಲಿ ಹಾಕಿಕೊಂಡು ತಿನ್ನಿರಿ. ನಿಧಾನವಾಗಿ ಆಲದ ಹಾಲಿನ ಪ್ರಮಾಣವನ್ನು ಬೆಳೆಸುತ್ತ ಹೋಗಿರಿ, ೮ -೧೦ ದಿನಗಳಾದ ಮೇಲೆ ಕಡಿಮೆ ಮಾಡುತ್ತ ೪೦ ದಿನಗಳ ವರೆಗೆ ಈ ಪ್ರಯೋಗವನ್ನು ಮಾಡಿರಿ
  • ಆಲದ ಮರದ ಹಾಲು ಮೆದುಳು,ಎದೆಗೆ ಶಕ್ತಿಯನ್ನು ಕೊಡುತ್ತದೆ ಹಾಗು ಮೂತ್ರ ಬಾಧೆ (ಮೂತ್ರ ನಿಲ್ಲುವುದು) ಯಲ್ಲು ಆರಾಮವನ್ನು ಕೊಡುತ್ತದೆ, ಇದನ್ನು ಸೇವಿಸುವದರಿಂದ ರಕ್ತಪ್ರದರ, ಮುಳವ್ಯಾಧಿಯಲ್ಲಿ ರಕ್ತ ಸೋರುವಿಕೆ ನಿಲ್ಲುವುದು, ಗಾಯ, ಉಳುಕು ಹಾಗು ಗಂಟು ರೋಗಗಳಿಂದಾದ ಬಾವುಗಳ ಮೇಲೆ ಇದರ ಹಾಲನ್ನು ಲೇಪಿಸುವದರಿಂದ ಬಾವು ಕಡಿಮೆಯಾಗುತ್ತದೆ
  • ಆಲದ ಮರದ ತೊಗಟೆಯಿಂದ ಕಷಾಯವನ್ನು ತಯಾರಿಸಿ ಪ್ರತಿದಿನ ಒಂದು ಕಪ ನಂತೆ ಕುಡಿಯುವದರಿಂದ ಮಧುಮೇಹ (ಡಯಾಬಿಟೀಸ್) ರೋಗದಲ್ಲಿ ಲಾಭವಾಗುತ್ತದೆ ಹಾಗು ಶರೀರದಲ್ಲಿ ಶಕ್ತಿ ಹೆಚ್ಚಾಗುತ್ತದೆ
  • ಅದರ ಕೋಮಲವಾದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ, ಅರ್ಧ ಲೀಟರ ನೀರಿನಲ್ಲಿ ಒಂದು ಚಮಚೆ  ಚೂರ್ಣವನ್ನು ಹಾಕಿ ಕಷಾಯವನ್ನು ತಯಾರಿಸಿ, ನೀರು ನಾಲ್ಕಾಂಶ ಉಳಿದಾಗ ಕೆಳಗಿಳಿಸಿ ಸೋಸಿಕೊಳ್ಳಿ ಅದರಲ್ಲಿ ಪುಡಿ ಮಾಡಿದ ಕಲ್ಲುಸಕ್ಕರೆಯನ್ನು ಸೇರಿಸಿಕೊಂಡು ಕುಡಿಯಿರಿ. ಈ ಪ್ರಯೋಗದಿಂದ ಮೆದುಳಿನ ಶಕ್ತಿ ಹೆಚ್ಚಾಗುವದಲ್ಲದೇ ಹಳೆಯದಾದ ನೆಗಡಿ ಶೀತವನ್ನು ಕಡಿಮೆ ಮಾಡುತ್ತದೆ

ಕಾಮೆಂಟ್‌ಗಳಿಲ್ಲ: