ಆರ್ಥಿಕ ತೊಂದರಗಳಿದ್ದಲ್ಲಿ

  • ಹೋಳಿ ಹುಣ್ಣಿಮೆಯಂದು ಒಂದು ಸಲ ಉಪ್ಪು ಬಳಸದೇ ತಯಾರಿಸಿದ ಭೋಜನವನ್ನು ಸೇವಿಸಿರಿ, ಒಂದು ಸಲ ಉಪವಾಸ ಮಾಡಿರಿ, ಹೋಳಿ ಹುಣ್ಣಿಮೆಯ ರಾತ್ರಿಯಂದು ಚಂದ್ರನಿಗೆ ಪಾಯಸದ ನೈವೇದ್ಯ ತೋರಿಸಿ ಸೇವಿಸಿರಿ. ದೀಪ-ಧೂಪಗಳಿಂದ ಆರತಿಯನ್ನು ಮಾಡಿ, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿ, ಸಕ್ಕರೆ, ಕುಂಕುಮ ಹಾಗು ಹೂವುಗಳನ್ನು ಹಾಕಿ ಕೆಳಗೆ ಹೇಳಿದ ಮಂತ್ರವನ್ನು ಉಚ್ಛರಿಸುತ್ತ ಚಂದ್ರನಿಗೆ ಅರ್ಘ್ಯವನ್ನು ನೀಡಿರಿ -

ದಧೀಶಂಖಃ ತುಷಾರಾಭಂ ಕ್ಷೀರೋದಾರ್ಣವ ಸಂನಿಭಮ್
ನಮಾಮಿ ಶಶಿನಂ ಸೋಮಂ ಶಂಭರ್ಮುಕುಟಭೂಶಣಂ
ಹೇ ಚಂದ್ರ ದೇವ! ಶಿವ ಪರಮಾತ್ಮ ನಿಮ್ಮನ್ನು ತಮ್ಮ ತಲೆಯ ಮೇಲೆ ಧರಿಸಿದ್ದಾರೆ, ನಿಮಗೆ ನನ್ನ ನಮಸ್ಕಾರಗಳು.
ಮೇಲೆ ಹೇಳಿದ ಮಂತ್ರ ಮರೆತರೆ ಓಂ ಸೋಮಾಯ ನಮಃ . . . ಓಂ ಸೋಮಾಯ ನಮಃ . . .ಎಂಬ ಮಂತ್ರವನ್ನು ಜಪಿಸಬಹುದು.
  • ಪ್ರತಿ ತಿಂಗಳು ಶುಕ್ಲ ಪಕ್ಷದ ದ್ವಾದಶಿಯಿಂದ ಹುಣ್ಣಿಮೆಯ ತನಕ ಚಂದ್ರನಿಗೆ ಅರ್ಘ್ಯವನ್ನು ಕೊಡುವದರಿಂದ ಮನೆಯಲ್ಲಿ ಸಮ್ರದ್ಧಿಯುಂಟಾಗುವುದು
  • ಎಂಟು ವಾರಗಳ ವರೆಗೆ ಮಹಾಲಕ್ಷ್ಮಿಯ ದೇವಸ್ಥಾನದಲ್ಲಿ ಧೂಪ-ದೀಪಗಳ ದಾನವನ್ನು ಮಾಡುವದರ ಜೊತೆಗೆ ಪುರುಷಾರ್ಥವನ್ನು ಮಾಡಿದಲ್ಲಿ ಲಾಭವಾಗುವುದು

ಕಾಮೆಂಟ್‌ಗಳಿಲ್ಲ: